Advertisement
ಸೋಂಕು ಹರಡಿದ ತತ್‌ಕ್ಷಣ ಇಲ್ಲಿನ ಆಡಳಿತಾಧಿಕಾರಿಗಳು ಲಾಕ್‌ಡೌನ್ ಮಾಡಿ ದ್ದಲ್ಲದೆ ಅತಿಯಾಗಿ ಸೋಂಕು ಹರಡಿದ ಪ್ರದೇಶಗಳನ್ನು ಸೀಲ್‌ಡೌನ್ ಮಾಡಿದರು. ಲಾಕ್‌ಡೌನ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕ
Related Articles
Advertisement
ಯೋಜನ ಪೂರಕವಾಗಿ ನಡೆದ ನಿಯಂತ್ರಣ ಕ್ರಮ ಮತ್ತು ಲಕ್ಷಾಂತರ ರೂ. ಗಳ ದಂಡಕ್ಕೆ ಹೆದರಿ ಹೆಚ್ಚಿನವರು ಮನೆಯಲ್ಲೇ ಉಳಿದುಕೊಂಡಿದ್ದರಿಂದ ಹಾಗೂ ಲಾಕ್‌ಡೌನ್ ಅನಂತರ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮೊದಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಇವತ್ತು ದುಬಾೖಯಲ್ಲಿ ಕೋವಿಡ್ ಹರಡುವಿಕೆ ಬಹಳ ಕಡಿಮೆಯಾಗಿದೆ.
ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಪ್ರಮುಖರು, ಉಪ ಸಮಿತಿ ಸದಸ್ಯರು ಸೇರಿ ದಾನಿಗಳ ನೆರವಿನಿಂದ ಸಂಕಷ್ಟದಲ್ಲಿದ್ದ ಕನ್ನಡಿಗರು ಸೇರಿ ಹಲವು ಭಾರತೀಯರು ಮತ್ತು ವಿದೇಶಿಯರಿಗೆ ಸಹಾಯ ಮಾಡಿದರು. ಕಳೆದ ವರ್ಷ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಲಾಕ್‌ಡೌನ್ ವೇಳೆ 19 ಲಕ್ಷ ರೂ. ಗಳ ಆಹಾರ ಕಿಟ್ ವಿತರಿಸಿದ್ದಲ್ಲದೆ ಸಂಕಷ್ಟದಲ್ಲಿದ್ದವರಿಗೆ ತಾಯಿನಾಡು ಮರಳಲು ಉಚಿತ ವಿಮಾನ ಟಿಕೆಟ್, ಚಿಕಿತ್ಸೆ ಸೌಲಭ್ಯಗಳನ್ನು ಮಡಲಾಯಿತು. ಈ ವರ್ಷ ಕರ್ನಾಟಕದ ಬೆಂಗಳೂರು ಮೈಸೂರು ಮಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಬಡವರಿಗೆ ರೇಷನ್ ಕಿಟ್ ಮತ್ತು ಆಹಾರ ಪೊಟ್ಟಣ ವಿತರಿಸಲಾಯಿತು.
ಒಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮದೊಂದಿಗೆ ಜನಸೇವೆಗೆ ಆದ್ಯತೆ ನೀಡಿದ ದುಬೈ ರಾಜಕುಮಾರರಾದ ಶೇಕ್ ಖಲೀಫಾ ಬಿನ್ ಜಾಯೆದ್ ಮತ್ತು ಶೇಕ್ ಮೊಹಮ್ಮದ್ ಬಿನ್ ಮುಕು¤ಮ್ ಇವರ ನೇತೃತ್ವದಲ್ಲಿ ಇಲ್ಲಿನ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ, ಸಮಯಕ್ಕೆ ಸರಿಯಾಗಿ ಆಹಾರ ವ್ಯವಸ್ಥೆ ಸೌಲಭ್ಯ ಕಲ್ಪಿಸಿದ್ದು ಮಾತ್ರವಲ್ಲದೆ ದುಬಾರಿ ದಂಡದ ಪರಿಣಾಮವೇ ಕೊರೊನಾ ನಿಯಂತ್ರಣ ಸಾಧ್ಯವಾಯಿತು ಎಂದರೆ ತಪ್ಪಾಗಲಾರದು. ಅಲ್ಲದೇ ಕೋವಿಡ್ ವ್ಯಾಕ್ಸಿನ್ ಕಂಡುಹಿಡಿದ ಆರಂಭದಲ್ಲೇ ಮೊದಲ ಡೋಸ್ ಅನ್ನು ಶೇಕ್ ಮೊಹಮ್ಮದ್ ತೆಗೆದುಕೊಳ್ಳುವ ಮೂಲಕ ನಾಗರಿಕರಲ್ಲಿ ವ್ಯಾಕ್ಸಿನ್ ಪಡೆಯಲು ಧೈರ್ಯ ತುಂಬಿ ಮಾದರಿಯಾದರು.
ಸಿಕ್ಕಿದ್ದರಲ್ಲಿ ತೃಪ್ತಿ ಪಡಬೇಕಾದ ಕಾಲ
ದೇಶದ ಬಹುಪಾಲು ಜನರಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಎಷ್ಟೇ ಮುಂದುವರಿದ ದೇಶಗಳೂ ಸರಿಯಾದ ವ್ಯವಸ್ಥೆ ಮಾಡುವುದು ಸಾಧ್ಯವಿಲ್ಲ. ಇದಕ್ಕೆ ಸರಕಾರ, ಆರೋಗ್ಯ ವ್ಯವಸ್ಥೆಯ ನಿರ್ಲಕ್ಷ್ಯ ಎಂದು ಹೇಳಲು ಸಾಧ್ಯವಿಲ್ಲ. ಕೋಟ್ಯಂತರ ಜನರಲ್ಲಿ ಎಷ್ಟು ಮಂದಿಗೆ ಏಕಕಾಲಕ್ಕೆ ಎಲ್ಲ ಸೌಲಭ್ಯ ತಲುಪಿಸಲು ಸಾಧ್ಯವಾಗುತ್ತದೆ? ಎಷ್ಟೋ ಬಾರಿ ಅದರಲ್ಲೂ ಮುಖ್ಯವಾಗಿ ಕೋವಿಡ್ ಸಂಕಷ್ಟದ ವೇಳೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವಾಗ ಹಲವು ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದೆ ನಿರಾಸೆ ಪಟ್ಟವರಲ್ಲಿ ನಾನೂ ಒಬ್ಬ. ಹೀಗಾಗಿ ಇಂಥ ಸಂದರ್ಭದಲ್ಲಿ ಜನರು ಆರೋಗ್ಯ ಸಂಸ್ಥೆ, ಸರಕಾರದ ಜತೆ ಕೈ ಜೋಡಿಸಿ ನಾಗರಿಕರಾಗಿ ತಮ್ಮ ಜವಾಬ್ದಾರಿಯನ್ನು ಅರಿತು ಹೋರಾಡಬೇಕು. ಸರಕಾರವೂ ಕೂಡ ಈ ವೇಳೆ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ ಬಡವರಿಗೆ ಆಹಾರ, ಚಿಕಿತ್ಸೆ ನೀಡುವ ಕಡೆಗೆ ಹೆಚ್ಚಿನ ಗಮನಕೊಡಬೇಕು. ಮೊದಲಿಗೆ ದೇಶದ ಪ್ರಜೆಗಳಿಗೆ ಹಂಚಲು ಲಸಿಕೆಯ ವ್ಯವಸ್ಥೆ ಮಾಡಬೇಕು.
ಕೊರೊನಾ ಬಂದವರನ್ನು ಒಂಟಿ ಯಾಗಿಸಬೇಡಿ. ಸಾಮಾಜಿಕ ಅಂತರ ಕಾಯ್ದುಕೊಂಡು ವೈದ್ಯರು, ಸರಕಾರ ಸೂಚಿಸುವ ಮುನ್ನೆಚ್ಚರಿಕೆಗಳನ್ನು ಪಾಲಿಸಿ ಕೋವಿಡ್ ರೋಗಿಗಳ ಅಥವಾ ಸಾಮಾನ್ಯ ಜನರ ಸೇವೆ ಮಾಡಲು ಎಲ್ಲರೂ ಮುಂದೆ ಬರಬೇಕು. ಈಗಾಗಲೇ ಸಾಕಷ್ಟು ಮಂದಿ ಇದರಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇದು ಭಾರತದಂಥ ದೇಶದಲ್ಲಿ ಸಾಲುವುದಿಲ್ಲ. ಹೀಗಾಗಿ ಇನ್ನಷ್ಟು ಮಂದಿ ಇದಕ್ಕೆ ಕೈ ಜೋಡಿಸಬೇಕಿದೆ. ಆಗ ಮಾತ್ರ ಕೊರೊನಾವನ್ನು ನಿಯಂತ್ರಿಸುವುದು ಖಂಡಿತ ಸಾಧ್ಯವಿದೆ.
ರಫೀಕಲಿ, ಕೊಡಗು, ದುಬೈ