Advertisement

ದುಬೈಯಲ್ಲಿ 33 ಕೋಟಿ ರೂ. ಜಾಕ್‌ ಪಾಟ್‌ ಲಾಟರಿ ಗೆದ್ದ ಭಾರತ ಮೂಲದ ಚಾಲಕ

10:05 AM Dec 24, 2022 | Team Udayavani |

ದುಬೈ: ಅದೃಷ್ಟ ಯಾವ ಸಮಯದಲ್ಲಿ ಬೇಕಾದರೂ ವ್ಯಕ್ತಿಯ ಜೀವನ ಬದಲಿಸಬಹುದು. ವಿದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬನ ಬದುಕಿನಲ್ಲಿ ಇಂಥದ್ದೇ ದೊಡ್ಡ ಬದಲಾವಣೆಯಾಗಿದೆ.

Advertisement

ಅಜಯ್ ಒಗುಲಾ ಮೂಲತಃ ದಕ್ಷಿಣ ಭಾರತದವರು. ಕಳೆದ ಕೆಲ ವರ್ಷಗಳಿಂದ ದುಬೈಯ ಚಿನ್ನದಂಗಡಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅಜಯ್‌ ಎಮಿರೇಟ್ಸ್ ಡ್ರಾ ಟಿಕೆಟ್ ಕೊಳ್ಳಲು ನಿರ್ಧರಿಸಿದ್ದರು. ಖರೀದಿಸಿದ ಮೊದಲ ಟಿಕೆಟ್‌ ನಲ್ಲೇ ದೊಡ್ಡಮಟ್ಟದ ಮೊತ್ತ  ಅಜಯ್‌ ಗೆ ಒಲಿದು ಬಂದಿದೆ.

ಅಜಯ್‌ ಹಿಂದೆಂದೂ ಲಾಟರಿ ಟಿಕೆಟ್‌ ಖರೀಸಿದಿಸಿಲ್ಲ. ಎಮಿರೇಟ್ಸ್ ಟಿಕೆಟ್‌ ಡ್ರಾ ಆದ ಬಳಿಕ ತಾನು  ಬಹುಮಾನ ಗೆದ್ದಿರುವುದು ಗೊತ್ತಾಗುತ್ತದೆ. ಮೊದಲಿಗೆ ಸಣ್ಣ ಮೊತ್ತ ಇರಬಹುದು ಎಂದುಕೊಂಡ ಅಜಯ್‌ ಅವರಿಗೆ ತಾನು 33 ಕೋಟಿ ರೂ. ಗೆದ್ದಿದ್ದೇನೆ ಎಂದು ಗೊತ್ತಾದಾಗ ಸಂತಸದಿಂದ “ನನಗಿನ್ನೂ ನಾನು ಜಾಕ್ ಪಾಟ್‌ ಗೆದ್ದಿದ್ದೇನೆ ಎನ್ನುವುದನ್ನು ನಂಬೋಕೆ ಸಾಧ್ಯನೇ ಆಗುತ್ತಿಲ್ಲ” ಎನ್ನುತ್ತಾರೆ.

33 ಕೋಟಿ.ರೂ ಲಾಟರಿ ಗೆದ್ದ ಬಳಿಕ ಅಜಯ್‌ ತಾವೊಂದು ಸ್ವಂತ ಮನೆ ಕಟ್ಟಬೇಕು ಹಾಗೆಯೇ ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಆರಂಭಿಸುವ ಯೋಜನೆಯನ್ನು ಹೊಂದಿದ್ದಾರೆ. ಇದರೊಂದಿಗೆ ಅಗತ್ಯ ಹಾಗೂ ಬಡ ಕುಟುಂಬಕ್ಕೆ ಒಂದಷ್ಟು ಸಹಾಯ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next