Advertisement

ಕ್ರಿಕೆಟ್‌ ನಾಯಕತ್ವಕ್ಕೆ ಡು ಪ್ಲೆಸಿಸ್‌ ಗುಡ್‌ಬೈ

11:13 AM Feb 19, 2020 | sudhir |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಅನುಭವಿ ಆಟಗಾರ ಫಾ ಡು ಪ್ಲೆಸಿಸ್‌ ಟೆಸ್ಟ್‌ ಮತ್ತು ಟಿ20 ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಕೂಡಲೇ ಜಾರಿಗೆ ಬರುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಗೆ (ಸಿಎಸ್‌ಎ) ಮನವಿ ಮಾಡಿದ್ದಾರೆ.

Advertisement

“ನಾಯಕತ್ವ ಪಡೆದ ದಿನದಿಂದ ತಂಡವನ್ನು ಉತ್ತಮ ಹಾದಿಯಲ್ಲಿ ಮುನ್ನಡೆಸುವ, ಶ್ರೇಷ್ಠ ಆಟವಾಡುವ ಹಾಗೂ ರಾಷ್ಟ್ರೀಯ ತಂಡಕ್ಕೆ ಸೇವೆ ಸಲ್ಲಿಸುವ ಬದ್ಧತೆಯೊಂದಿಗೆ ಹೆಜ್ಜೆಯಿಟ್ಟಿದ್ದೆ. ಇದೀಗ ತಂಡ ಹೊಸ ಹಾದಿಯ ಕಡೆಗೆ ಸಾಗುತ್ತಿದೆ. ಹೊಸ ಆಟಗಾರರು ಬಂದಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಸರ್ವತೋಮುಖ ಬೆಳವಣಿಗೆ ನಿಟ್ಟಿನಲ್ಲಿ ನಾನು ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ’ ಎಂದು ಡು ಪ್ಲೆಸಿಸ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿ¨ªಾರೆ.

ಕ್ವಿಂಟನ್‌ ಡಿ ಕಾಕ್‌ ದಕ್ಷಿಣ ಆಫ್ರಿಕಾ ತಂಡದ ನೂತನ ನಾಯಕನಾಗಿ ಮೂಡಿಬರುತ್ತಿದ್ದು, ಅವರ ಸಾರಥ್ಯದಲ್ಲಿ ಇತ್ತೀಚೆಗೆ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಮ್ಮ ತಂಡ ಚೇತರಿಕೆಯ ಪ್ರದರ್ಶನ ನೀಡಿದೆ ಎಂದು 35ರ ಹರೆಯದ ಡು ಪ್ಲೆಸಿಸ್‌ ಹೇಳಿದರು.
ಆಸ್ಟ್ರೇಲಿಯ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿ ಸಂದರ್ಭದಲ್ಲೇ ಡು ಪ್ಲೆಸಿಸ್‌ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ವೈಯಕ್ತಿಕ ಲಾಭದ ನಿರ್ಧಾರವಲ್ಲ
“ಎಲ್ಲವೂ ಸರಿಯಿದ್ದರೆ ಇನ್ನೂ ಸ್ವಲ್ಪ ಕಾಲ ಟೆಸ್ಟ್‌ ತಂಡವನ್ನು ಮುನ್ನಡೆಸುವ ಹಾಗೂ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ನಾಯಕತ್ವ ವಹಿಸುವ ಬಯಕೆಯಿತ್ತು. ಆದರೆ, ನಾಯ ಕನಾಗಿ ಕೆಲವೊಮ್ಮೆ ನಿಸ್ವಾರ್ಥ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಗುಣ ಎಲ್ಲ ನಾಯಕರಲ್ಲೂ ಇರುತ್ತದೆ. ಆದರೆ ಇದು ತಂಡದ ಗೆಲುವಿಗಾಗಿ ಮಾತ್ರವೇ ಹೊರತು ವೈಯಕ್ತಿಕ ಲಾಭಕ್ಕಲ್ಲ’ ಎಂದು ಡು ಪ್ಲೆಸಿಸ್‌ ಮಾರ್ಮಿಕವಾಗಿ ನುಡಿದರು.

“ನನಗೆ ಯಾವುದೇ ಫಿಟ್‌ನೆಸ್‌ ಸಮಸ್ಯೆ ಇಲ್ಲ. ತಂಡಕ್ಕೆ ನನ್ನಿಂದಾಗುವ ಕೊಡುಗೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ. ತಂಡಕ್ಕಾಗಿ ಪಂದ್ಯಗಳನ್ನು ಗೆದ್ದುಕೊಡಬಲ್ಲ ಆಟವಾಡುವುದನ್ನು ಮುಂದುವರಿಸಲಿದ್ದೇನೆ’ ಎಂದು ಡು ಪ್ಲೆಸಿಸ್‌ ಹೇಳಿದ್ದಾರೆ.

Advertisement

ಕಳೆದ ವಿಶ್ವಕಪ್‌ ಮತ್ತು ಅನಂತರದ ಎಲ್ಲ ಸರಣಿ ಗಳಲ್ಲೂ ಡು ಪ್ಲೆಸಿಸ್‌ ನಾಯಕತ್ವ ವಿಫ‌ಲವಾಗಿತ್ತು.

ವಿಶ್ವಕಪ್‌ ವೈಫ‌ಲ್ಯ
ಎಬಿ ಡಿ ವಿಲಿಯರ್ ಕೆಳಗಿಳಿದ ಬಳಿಕ 2017ರಲ್ಲಿ ಡು ಪ್ಲೆಸಿಸ್‌ ಅವರನ್ನು ಮೂರೂ ಮಾದರಿಯ ಕ್ರಿಕೆಟ್‌ ತಂಡಗಳ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ ಯಶಸ್ಸು ಕೈ ಹಿಡಿ ಯಲಿಲ್ಲ. 2019ರ ವಿಶ್ವಕಪ್‌ನಲ್ಲಿ ತಂಡ ಲೀಗ್‌ ಹಂತದಲ್ಲೇ ಹೊರಬಿದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next