Advertisement

ಚೇತನ್‌ ಡಿಟಿಎಸ್‌ ಎಫೆಕ್ಟ್!

11:35 AM Mar 02, 2021 | Team Udayavani |

“ಡಿಟಿಎಸ್‌’ ಅಂದ್ರೆ ಬಹುತೇಕ ಸಿನಿಮಾ ಮಂದಿಗೆ, ಪ್ರೇಕ್ಷಕರಿಗೆ ಗೊತ್ತೇ ಇರುತ್ತದೆ. ಈಗ ಇದೇ “ಡಿಟಿಎಸ್‌’ ಹೆಸರಿನಲ್ಲಿ ಹೊಸಚಿತ್ರವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಇಲ್ಲಿ “ಡಿಟಿಎಸ್‌’ ಅಂದ್ರೆ, “ಡೇರ್‌ ಟು ಸ್ಲೀಪ್‌’ ಅಂಥ ಅರ್ಥವಂತೆ!

Advertisement

ಹೌದು, “ಆ ದಿನಗಳು’ ಖ್ಯಾತಿಯ ಚೇತನ್‌ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ “ಡಿಟಿಎಸ್‌’ ಎಂದು ಹೆಸರಿಡಲಾಗಿದ್ದು, ಇದೇ ಫೆ. 24ರಂದು ಚೇತನ್‌ ಜನ್ಮದಿನದ ಸಂದರ್ಭದಲ್ಲಿ ಈ ಚಿತ್ರವನ್ನು ಚಿತ್ರತಂಡ ಅನೌನ್ಸ್‌ ಮಾಡಿದೆ. ಈಗಾಗಲೇ ಚೇತನ್‌ ಅಭಿನಯಿಸುತ್ತಿರುವ “100 ಕ್ರೋರ್‌’ಚಿತ್ರವನ್ನು ನಿರ್ಮಿಸುತ್ತಿರುವ ಸಂಸ್ಥೆಯೇ ಈ ಚಿತ್ರವನ್ನೂನಿರ್ಮಾಣ ಮಾಡುತ್ತಿದೆ. ತೆಲುಗು ಮೂಲದ ಸಾಯಿ ಕಾರ್ತಿಕ್‌ ಮತ್ತು ಶ್ರೀಕಾಂತ್‌ ದೀಪಾಲ “ಡಿಟಿಎಸ್‌’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ : ಸೆಲೆಬ್ರಿಟಿಗಳಿಗೆ ದಾಸನ ಕಿವಿಮಾತು

“ಡಿಟಿಎಸ್‌’ ಚಿತ್ರಕ್ಕೆ ಅಭಿರಾಮ್‌ ಫಿಲ್ಲ ನಿರ್ದೇಶನ ಮಾಡಲಿದ್ದಾರೆ. ಚೇತನ್‌ ಜತೆಗೆ ತೆಲುಗಿನ ಖ್ಯಾತ ಹಾಸ್ಯನಟ ಸುನೀಲ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿಅಭಿನಯಿಸುತ್ತಿದ್ದು, ಈಗಾಗಲೇ ಸದ್ದಿಲ್ಲದೆ ಈ ಚಿತ್ರದ ಚಿತ್ರೀಕರಣವೂ ಶುರುವಾಗಿದೆ. ಇನ್ನು ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಥಾಹಂದರ ಹೊಂದಿರುವ “ಡಿಟಿಎಸ್‌’ ಚಿತ್ರದಲ್ಲಿ, ಸುನೀಲ್‌ ಖಡಕ್‌ ಪೊಲೀಸ್‌ ಅಧಿಕಾರಿಯಾದರೆ, ಚೇತನ್‌ ಕೂಡ ಅಂಥದ್ದೇ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರಂತೆ.

ಚಿತ್ರದಲ್ಲಿ ನಾಲ್ಕು ಭರ್ಜರಿ ಆ್ಯಕ್ಷನ್‌ ದೃಶ್ಯಗಳಿದ್ದು, ಈ ಚಿತ್ರದ ಬಹುತೇಕ ಚಿತ್ರೀಕರಣವನ್ನುಬೆಂಗಳೂರು, ಹೈದರಾಬಾದ್‌,ದುಬೈ, ಥಾಯ್ಲೆಂಡ್‌ ಮೊದಲಾದ ಕಡೆಗಳಲ್ಲಿ ನಡೆಸಲು ಚಿತ್ರತಂಡ ಯೋಜಿಸಿದೆ.

Advertisement

“ಡಿಟಿಎಸ್‌’ ಚಿತ್ರದಲ್ಲಿ ಬಾಲಿವುಡ್‌ ನಟಿಯರಾದ ಡೋನಲ್‌ ಮತ್ತು ನತಾಶಾ ನಾಯಕಿಯರಾಗಿಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಕಬೀರ್‌ ಸಿಂಗ್‌, ಕೃಷ್ಣಮುರಳಿ, ಚರಣ್‌, ಶಕಲಕಾ ಶಂಕರ್‌, ಚಿತ್ರಂ ಶ್ರೀನು,ಗೆಟಪ್‌ ಸೀನು, ರವಿ ವರ್ಮಾ, ರಕೇಂದು ಮೌಳಿಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆನಿರ್ಮಾಪಕ ಸಾಯಿ ಕಾರ್ತಿಕ್‌ ಅವರೇ ಸಂಗೀತ ಸಂಯೋಜಿಸುತ್ತಿದ್ದು, ಇದೇ ವರ್ಷದ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next