Advertisement

ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ

07:48 PM Mar 10, 2021 | Team Udayavani |

ಬಳ್ಳಾರಿ: ರಾಜ್ಯದಲ್ಲಿ ಪೊಲೀಸರಿಂದ ದಲಿತರ ಮೇಲೆ ನಡೆದ ದೌರ್ಜನ್ಯ ಮತ್ತು ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ, ರೌಡಿಶೀಟರ್‌ ಮಾಡಿ ಜೈಲಿಗೆ ಕಳುಹಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಡಿಜಿ ಸಾಗರ್‌)ಯ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ಎಲ್ಲ ಸುಳ್ಳು ಕೇಸ್‌ಗಳನ್ನು ಕೂಡಲೇ ವಾಪಸ್‌  ಪಡೆಯಬೇಕು. ಜಿಲ್ಲೆಯಲ್ಲಿ ಬರುವ ಎಲ್ಲ ಬುದ್ಧ, ಬಸವ, ಡಾ|ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗಳಿಗೆ ಹಾಗೂ ಗಣ್ಯರ ಪ್ರತಿಮೆಗಳಿಗೆ ಭದ್ರತೆ ಒದಗಿಸಬೇಕು. ಜಾತಿವಾದಿ, ಕೋಮುವಾದಿ, ಡಾ| ಬಿ.ಆರ್‌.ಅಂಬೇಡ್ಕರ್‌  ವಿರೋಧಿ ,ಹಿಂದಿನ ಇಂಡಿ ವಿಭಾಗದ ಹಾಗೂ ಈಗಿನ ಧಾರವಾಡ ಗ್ರಾಮೀಣ ವಿಭಾಗದ ಡಿವೈಎಸ್ಪಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು  ಒತ್ತಾಯಿಸಿದರು.

ದಲಿತ ಸಮಿತಿ ಜಿಲ್ಲಾ ಮುಖಂಡ, ಹೋರಾಟಗಾರ ವೈ.ಸಿ. ಮಯೂರ ಅವರ ಮೇಲೆ ಹಾಗೂ ಮತ್ತೂಬ್ಬ ಹೋರಾಟಗಾರ ಜಿತೇಂದ್ರ ಕಾಂಬಳೆ ಅವರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಲಾಗಿದ್ದು ಕೂಡಲೇ ಈ  ಎಲ್ಲ ಸುಳ್ಳು ಕೇಸ್‌ಗಳನ್ನು ತೆಗೆದು ಹಾಕಬೇಕು. ರದ್ದು ಮಾಡಿರುವ ಮಯೂರ ಅವರ ಶಸ್ತ್ರಾಸ್ತ್ರ ಪರವಾನಗಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದವರು ಆಗ್ರಹಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ, ಜಿಲ್ಲಾ ಸಂಚಾಲಕ ಎಚ್‌.ಸಿದ್ದೇಶ್‌ ನೇತೃತ್ವದಲ್ಲಿ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಡಗಿ ಚನ್ನಪ್ಪವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿತು.  ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next