Advertisement

ಒಣಗುತ್ತಿರುವ ಭತ್ತದ ಗದ್ದೆಗಳು; ಜಲಸಂಪನ್ಮೂಲ ಅಧಿಕಾರಿಗಳ ನಿರ್ಲಕ್ಷ

07:33 PM Mar 15, 2022 | Team Udayavani |

ಗಂಗಾವತಿ : ಮುನಿರಾಬಾದ್ ಅವರ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಗಿಡದ ಬೇರಿನ ಪರಿಣಾಮ ಬೊಂಗಾ ಬಿದ್ದು ಅಪಾರ ಪ್ರಮಾಣದಲ್ಲಿ ನೀರು ನದಿಯ ಪಾಲಾಗಿದೆ .ಸಮರೋಪಾದಿಯಲ್ಲಿ ಕಾಲುವೆಯ ಪುನರ್ ನಿರ್ಮಾಣ ಕಾರ್ಯ ನಡೆದಿದ್ದು ಕಳೆದ 2ದಿನಗಳ ಹಿಂದೆ ಕಾಲುವೆಗೆ ನೀರನ್ನು ಹರಿಸಲಾಗುತ್ತಿದೆ .

Advertisement

ರಾಯಚೂರುವರೆಗೆ ನೀರು ಮುಟ್ಟುವ ತನಕ ಉಪ ಕಾಲುವೆಯ ಗೇಟ್ ಗಳನ್ನು ಎತ್ತಲಾಗುವುದಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಸ್ಪಷ್ಟಪಡಿಸಿದೆ .ಇದರಿಂದಾಗಿ ಕೊಪ್ಪಳ ಗಂಗಾವತಿ ಕಾರಟಗಿ ಸಿಂಧನೂರು ಭಾಗದಲ್ಲಿ ನಾಟಿ ಮಾಡಿದ ಭತ್ತದ ಗದ್ದೆ ಒಣಗುವ ಸ್ಥಿತಿ ಉಂಟಾಗಿದೆ .ಈ ಮಧ್ಯೆ ಐವತ್ತೊಂದನೇ ವಿತರಣಾ ಕಾಲುವೆ ಗೇಟನ್ನು ಕೆಲವು ರೈತರು ಸ್ವತಃ ತಾವೇ ಹೋಗಿ ಓಪನ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .

ಐವತ್ತು ನೇ ವಿತರಣಾ ಕಾಲುವೆ ಗೇಟ್ ಓಪನ್ ಆಗಿರುವುದರಿಂದ ರಾಯಚೂರಿಗೆ ನೀರು ತಲುಪುವುದು ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ .ಆದ್ದರಿಂದ ಮೇಲ್ಭಾಗದ ಗದ್ದೆಗಳು ಬಿಸಿಲಿನ ತಾಪಕ್ಕೆ ಒಣ ಭೂಮಿಯಲ್ಲಿ ಬಿರುಕು ಕಂಡು ಬರುತ್ತಿದೆ .ಭತ್ತದ ತೆನೆಕಟ್ಟುವ ಹಂತದಲ್ಲಿರುವುದರಿಂದ ನೀರು ಅವಶ್ಯಕತೆಯಿದೆ .ಮಧ್ಯ ಭಾಗದಲ್ಲಿ ರೈತರು ಉಪ ಕಾಲುವೆಯ ಗೇಟ್ ಗಳನ್ನು ಓಪನ್ ಮಾಡುವುದರಿಂದ ರಾಯಚೂರಿಗೆ ನೀರು ತಲುಪುವುದಿಲ್ಲ ಆದ್ದರಿಂದ ಜಲಸಂಪನ್ಮೂಲ ಇಲಾಖೆ ಕೂಡಲೇ ಕ್ರಮ ಕೈಗೊಂಡು ಮೇಲ್ಭಾಗದಿಂದ ಎಲ್ಲ ಉಪಕಾಲುವೆಗಳಿಗೆ ಹಂತಹಂತವಾಗಿ ಓಪನ್ ಮಾಡುವ ಮೂಲಕ ಒಣಗುತ್ತಿರುವ ಭತ್ತದ ಗದ್ದೆಯನ್ನು ಉಳಿಸ ಬೇಕೆಂದು ಗಂಗಾವತಿ ಕಾರಟಗಿ ಸಿಂಧನೂರು ಭಾಗದ ರೈತರು ಜಲಸಂಪನ್ಮೂಲ ಇಲಾಖೆಯವರಿಗೆ ಮನವಿ ಮಾಡಿದ್ದಾರೆ .

ಅಧಿಕ ಹಣ ಖರ್ಚು ಮಾಡಿ ಭತ್ತವನ್ನು ನಾಟಿ ಮಾಡಿದ ರೈತರು ಹಂಗಾಮಿನಲ್ಲಿ   ಮುನಿರಾಬಾದ್ ಪವರ್  ಹೌಸ್  ಹತ್ತಿರ ಹಾಗೂ ಗಂಗಾವತಿ ತಾಲೂಕಿನ ಕೇಸರಹಟ್ಟಿ ಹತ್ತಿರ 2 ಬಾರಿ ಕಾಲುವೆಯಲ್ಲಿ ಬಿರುಕು ಕಾಣಿಸಿಕೊಂಡು 5-6 ದಿನಗಳ ಕಾಲ ನೀರು ಇಲ್ಲದೆ ಭತ್ತದ ಗದ್ದೆಗಳು ಒಣಗಿವೆ ಪುನಃ ಈಗ ಉಪ  ಕಾಲುವೆಗಳಲ್ಲಿ ನೀರು ಇಲ್ಲದ ಕಾರಣ  ಭತ್ತದ ಗದ್ದೆಗಳು ಒಣಗುತ್ತಿವೆ ಅಧಿಕಾರಿಗಳು ಸಮರೋಪಾದಿಯಲ್ಲಿ ತಾನೂ ಮೇಲೆ ಕರ್ತವ್ಯ ನಿರ್ವಹಿಸಿ ಪೊಲೀಸ್ ಇಲಾಖೆ ಸಹಾಯದಿಂದ ಉಪ ಕಾಲುವೆಗಳಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ .

Advertisement
Advertisement

Udayavani is now on Telegram. Click here to join our channel and stay updated with the latest news.

Next