Advertisement
ವರ್ಷಪೂರ್ತಿ ಒಣಮೀನು ಲಭ್ಯವಾಗಿ ದ್ದರೂ ಮಳೆಗಾಲದಲ್ಲಿ ಮಾತ್ರ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತದೆ. ಜನರು ಸಂತೆಗೆ ಬಂದು ಎರಡು ತಿಂಗಳಿಗೆ ಬೇಕಾಗುವಷ್ಟು ಒಣ ಮೀನನ್ನು ಖರೀದಿಸಿ, ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಪ್ರತಿ ವರ್ಷ ಮೇ ಅಂತ್ಯ ಜೂನ್ ಪ್ರಾರಂಭದಲ್ಲಿ ಸಂತೆ ಮಾರುಕಟ್ಟೆಯಲ್ಲಿ ಒಣ ಮೀನಿನ ಮಾರಾಟ ಜೋರಾಗಿರುತ್ತದೆ. ಮಲ್ಪೆ ಬಂದರು ವ್ಯಾಪ್ತಿ ಹಾಗೂ ಕರಾವಳಿ ತೀರದ ಸುತ್ತಮುತ್ತಲಿನ ಮಹಿಳೆಯರು ಒಣಮೀನು ಮಾರಾಟದಲ್ಲಿ ತೊಡಗುತ್ತಾರೆ. ಇವರು ರಖಂ ಆಗಿ ಮೀನನ್ನು ಖರೀದಿಸಿ ಸಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
Related Articles
Advertisement
ಹಸಿಮೀನಿಗಿಂತ ಒಣ ಮೀನಿನ ರುಚಿ ವಿಭಿನ್ನ. ಮಹಿಳೆಯರು ಮೀನನ್ನು ಸಿಗಿದು, ಉಪ್ಪು ಬೆರೆಸಿ ಬಿಸಿಲಿನಲ್ಲಿ ಒಣಗಿಸಿ ಬೆಚ್ಚಗಿನ ವಾತಾವರಣದಲ್ಲಿ ಸಂಗ್ರಹಿಡುತ್ತಾರೆ. ಬಳಿಕ ಅವುಗಳನ್ನು ಮಾರಾಟ ಕೇಂದ್ರಕ್ಕೆ ಅಥವಾ ಸಂತೆಗೆ ತರುತ್ತಾರೆ.
ಕೇವಲ ಮಳೆಗಾಲ ಪ್ರಾರಂಭವಾಗುವ ಮುನ್ನ ಮಾತ್ರ ಹೆಚ್ಚು ವ್ಯಾಪಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಿಸೇಲ್‌ದರ ಒಂದೆ ಸವನೇ ಏರಿಕೆಯಾಗುವುದರಿಂದ ಮೀನು ಗಾರಿಕೆ ನಡೆಸುವುದೇ ಕಷ್ಟಕರವಾಗಿದೆ. ಹಾಗಾಗಿ ಒಣ ಮೀನುಗಾರಿಕೆಯೂ ದುಬಾರಿಯಾಗಿದೆ ಎನ್ನುತ್ತಾರೆ ಒಣಮೀನು ಮಾರಾಟ ಮಹಿಳೆಯರು.
ಮಳೆಗಾಲದಲ್ಲಿ ದರ ಹೆಚ್ಚು: ಮಲ್ಪೆ ಬಂದರಿನಲ್ಲಿ ಸುಮಾರು 70-75 ಮಂದಿ ಒಣಮೀನು ವ್ಯಾಪಾರಸ್ಥ ಮಹಿಳೆಯರು ಇದ್ದಾರೆ. ಬೇಸಗೆಯಲ್ಲಿ ಹಸಿಮೀನನ್ನು ಖರೀದಿಸಿ ಒಣಗಿಸುತ್ತೆವೆ. ಎಪ್ರಿಲ್, ಮೇ ತಿಂಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಚಿಲ್ಲರೆ ಮಾರಾಟಗಾರರಿಗೆ ರಖಂ ಆಗಿ ಕೊಡುತೇ¤ವೆ. ಮಳೆಗಾಲದಲ್ಲಿ ಹಸಿಮೀನು ಸಿಗದಿರುವುದರಿಂದ ಮೀನಿನ ದರಗಳು ಹೆಚ್ಚಾಗಿವೆ. ಕಡಿಮೆ ಪ್ರಮಾಣದಲ್ಲಿ ಸಿಗುವ ಮೀನಿಗೆ ದರ ಹೆಚ್ಚಿರುತ್ತದೆ. –ಜಯಂತಿ ಎಂ. ಕುಂದರ್, ಮಲ್ಪೆ, ಒಣಮೀನು ವ್ಯಾಪಾರಸ್ಥೆ