Advertisement

ಮಂಗಳೂರು: ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿ ಆರಂಭ

11:44 PM Feb 22, 2023 | Team Udayavani |

ಮಂಗಳೂರು: ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಿಂದ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು 2023ನೇ ಸಾಲಿಗೆ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರಕಾರ ಘೋಷಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ 11,750 ರೂ.ಗಳಂತೆ ಖರೀದಿಗೆ ಜಿಲ್ಲೆಯಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ.

Advertisement

ಅಗತ್ಯ ದಾಖಲೆಗಳು
ಉಂಡೆಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು 2023ರ ಮಾ. 12ರೊಳಗೆ ನೋಂದಾಯಿಸಿ ನೋಂದಣಿ ಚೀಟಿ ಪಡೆಯಬೇಕು. 2022-23ನೇ ಸಾಲಿನ ಪಹಣಿ ಪತ್ರ, ರೈತರು ತಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರಬೇಕು. ರೈತರ ಬಳಿ ಫ್ರೂಟ್ಸ್‌ ಐಡಿ ಇಲ್ಲದೇ ಇದ್ದಲ್ಲಿ ಅಥವಾ ಫ್ರೂಟ್ಸ್‌ನಲ್ಲಿ ಯಾವುದಾದರೂ ಮಾಹಿತಿ ಲಭ್ಯವಿಲ್ಲದಿದ್ದಲ್ಲಿ, ತಪ್ಪಿದ್ದಲ್ಲಿ ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ (ಆಧಾರ್‌ ಕಾರ್ಡ್‌ನೊಂದಿಗೆ ಜೋಡಣೆಗೊಂಡ) ಪುಸ್ತಕದ ನಕಲು ಪ್ರತಿಯೊಂದಿಗೆ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಉತ್ಪನ್ನವನ್ನು ಕೇಂದ್ರಕ್ಕೆ ಮಾರಲು ತರುವುದು.

ಪ್ರತೀ ಎಕರೆಗೆ 6 ಕ್ವಿಂಟಾಲ್‌ ಗರಿಷ್ಠ ಪ್ರಮಾಣ ಹಾಗೂ ನಿಗದಿತ ಅವಧಿಯೊಳಗೆ ನೋಂದಣಿಗೊಂಡ ಪ್ರತೀ ರೈತರಿಂದ ಗರಿಷ್ಠ 20 ಕ್ವಿಂಟಾಲ್‌ ಮಾತ್ರ ಖರೀದಿಸಲಾಗುವುದು. ಉಂಡೆ ಕೊಬ್ಬರಿ ಉತ್ಪನ್ನವನ್ನು 2023ರ ಜು. 27ರ ವರೆಗೆ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯ ವರೆಗೆ ಸರಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖರೀದಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next