Advertisement

ಸಮೀಕ್ಷೆಗೆ ಹೋಗಿದ್ದ ಆಶಾ ಕಾರ್ಯಕರ್ತೆರ ಮೇಲೆ ಮದ್ಯ ವ್ಯಸನಿಯಿಂದ ಹಲ್ಲೆ: ದೂರು

02:28 PM May 19, 2020 | keerthan |

ಬೆಳಗಾವಿ: ಕೋವಿಡ್-19 ಸಮೀಕ್ಷೆ ನಡೆಸಲು ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ‌ ಮದ್ಯ ವ್ಯಸನಿಯೋರ್ವ ಹಲ್ಲೆ‌ನಡೆಸಿ ಅವಾಚ್ಯ ಶಬ್ದಗಳಿಂದ‌ ನಿಂದಿಸಿ ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿಯ ಜ್ಯೋತಿ ನಗರದಲ್ಲಿ ನಡೆದಿದೆ.

Advertisement

ಜ್ಯೋತಿ ನಗರದ ಮದ್ಯವ್ಯಸನಿ ವಿನಾಯಕ‌ ಪ್ರಕಾಶ ಖರಾಗಡೆ ಎಂಬ ಮದ್ಯವ್ಯಸನಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯನ್ನೂ ಹಾಕಿದ್ದಾನೆ.‌ ಈ ಕುರಿತು ಆಶಾ ಕಾರ್ಯಕರ್ತೆಯರಾದ ಜಯಾ ಖಿಮಜಿ, ರೂಪಾ ಮುಸಳೆ, ಜ್ಯೋತಿ ಹತ್ತರಗಿ, ಲಕ್ಷ್ಮೀ ಪಾಟೀಲ ಎಂಬವರು ಕ್ಯಾಂಪ್ ಠಾಣೆಯಲ್ಲಿ ಹಲ್ಲೆಕೋರನ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಲೂ ಹೋದಾಗಲೂ ಈ ಮದ್ಯ ವ್ಯಸನಿ‌ ಪೊಲೀಸರೊಂದಿಗೂ ಜಗಳವಾಡಿ ರಾದ್ಧಾಂತ ನಡೆಸಿದ್ದಾನೆ.‌

ಜೀವ ಕೈಯಲ್ಲಿ ಹಿಡಿದು ಹಗಲಿರುಳು ದುಡಿಯುತ್ತಿರುವ ಕೋವಿಡ್ ವಾರಿಯರ್ಸ್ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ನಿರಂತರವಾಗಿ ನಡೆಯುತ್ತಿವೆ. ಅದರಂತೆ ಕ್ಯಾಂಪ್‌ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೋತಿ ನಗರದಲ್ಲಿ ಸೋಮವಾರದಂದು ಸೋಂಕಿನ ಬಗ್ಗೆ ಮಾಹಿತಿ ಪಡೆಯಲು ಆಶಾ ಕಾರ್ಯಕರ್ತೆಯರು ಹೋದಾಗ ಮದ್ಯವ್ಯಸನಿ ಜಗ‌ಳ‌‌ ತೆಗೆದು ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳೆದ‌ ಒಂದು ವಾರದಿಂದ ಜ್ಯೋತಿ ನಗರದಲ್ಲಿ ಆರೋಗ್ಯ ಸಿಬ್ಬಂದಿ ಜತೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ನಡೆಸುತ್ತಿದ್ದಾರೆ.‌ ಈ ವೇಳೆ ಹಲ್ಲೆ ನಡೆಸಿರುವ ವಿನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.‌ ಈ‌ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next