Advertisement

ತೀರ್ಥಹಳ್ಳಿ: ಕುಡಿದ ಮತ್ತಿನಲ್ಲಿ ಶಾಲೆಯ ವಿಗ್ರಹ ಧ್ವಂಸ ಮಾಡಿದ ಕುಡುಕ

06:55 PM Dec 28, 2021 | Suhan S |

ತೀರ್ಥಹಳ್ಳಿ: ತಾಲ್ಲೂಕಿನ ಹಾರೊಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಮ್ಮೂರ ಶಾಲೆಯಲ್ಲಿದ ಸರಸ್ವತಿ ವಿಗ್ರಹವನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.

Advertisement

ಘಟನೆಯ ಬಗ್ಗೆ ಯಾರೋ ಕಿಡಿಗೇಡಿಗಳು ಮದ್ಯ ಕುಡಿದು ದಾಂಧಲೆ ಮಾಡಿದ್ದಾರೆ ಎಂಬುದಾಗಿ ಸುದ್ದಿ ಹಬ್ಬಿತ್ತಾದರೂ  ವಾಸ್ತವವಾಗಿ ಕಳೆದ 1ವಾರದ ಹಿಂದೆ  ಗೋವಿಂದ ಎಂಬುವವನು ಶಾಲೆಯ ಮುಖ್ಯ ಶಿಕ್ಷಕಿ ಬಳಿ ಬಂದು ಕುಡಿಯುವುದಕ್ಕೆ ನೀರು ಕೇಳಿದ್ದಾರೆ ನೀರು ಕೊಡದೆ ಶಿಕ್ಷಕಿ ಆಚೆ ಕಳಿಸಿದಾರೆ ಎಂದು ಸಿಟ್ಟಿಗೆ ಗೋವಿಂದ ಈ ದಾಂಧಲೆ ನಡೆಸಿದ್ದಾರೆ.

ಗೋವಿಂದ  ಹಾರೋಗೊಳಿಗೆ  ಸುತ್ತಮುತ್ತ ಕಳೆದ ಇಪ್ಪತ್ತು ವರ್ಷಗಳಿಂದ ಕೆಲ ಬಲಾಡ್ಯರ ಮನೆಗಳಿಗೆ ಅಡಿಕೆ ಆರಿಸುವ ಕೆಲಸಕ್ಕೆ  ಈತ ಕಾಯಂ ಕೆಲಸಗಾರ,

ಈತ ಒಬ್ಬನೆ ಇದ್ದು ಸ್ಥಳೀಯ  ರಂಗಮಂದಿರದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಊರಿನಲ್ಲಿ ಅಡಿಕೆ ಆರಿಸುವ  ಕೆಲಸ ಮಾಡುವುದು ಅವರು ಕೊಡುವ ಚೂರುಪಾರು ಹಣದಲ್ಲಿ ಮದ್ಯ ಸೇವನೆ ಮಾಡುವುದು ಇವರ ಕಾಯಕ ಎಂಬುದರ ಬಗ್ಗೆ ಸ್ಥಳೀಯರು ಆರೋಪಿಸಿದ್ದು, ಈತ ಕುಡಿಯಲು ನೀರು ಕೊಡಲಿಲ್ಲ ಎಂಬ ಕಾರಣಕ್ಕೆ ಶಾಲೆಯ ಎದುರು ನಿರ್ಮಾಣ ಮಾಡಿದ ಗಾಂಧೀಜಿ ಪ್ರತಿಮೆ, ಸರಸ್ವತಿ ಪ್ರತಿಮೆ, ವಿವೇಕಾನಂದ, ಬುದ್ಧ ಪ್ರತಿಮೆ ಪುಡಿ ಪುಡಿ ಮಾಡಿ ಶಾಲೆಯ ಹಿಂದಿನ ತೋಟದಲ್ಲಿ ಇರುವ ಪೈಪ್ ಲೈನ್ ಮತ್ತು ಪೈಪಿಗೆ ಅಳವಡಿಸಿದ ಆರು ಜೆಟ್ ಮುರಿದು ಹಾಕಿದ್ದಾನೆ.

ಸ್ಥಳೀಯ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಸಸಿತೋಟ ಮಂಜುನಾಥ್ ರವರು ಈ ಬಗ್ಗೆ ತೀರ್ಥಹಳ್ಳಿ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಾರೆ. ದೂರಿನ ಆಧಾರದ ಮೇಲೆ ಪೋಲೀಸರು ಈತನನ್ನು ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Advertisement

ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next