ಪಾಟ್ನಾ: ಇತ್ತೀಚೆಗೆ ಅಸ್ಸಾಂನಲ್ಲಿ ಹಸೆಮಣೆಯಲ್ಲಿ ವರನೊಬ್ಬ ಕುಡಿದು ಟೈಟಾಗಿ ಬಿದ್ದಿರುವ ವಿಡಿಯೋ ವೈರಲ್ ಆಗಿತ್ತು. ಈಗ ಅಂಥದ್ದೇ ಮದುವೆ ಪ್ರಸಂಗದ ವಿಚಾರ ಯುಪಿಯಲ್ಲಿ ನಡೆದಿದ್ದು, ವೈರಲ್ ಆಗಿದೆ.
ಉತ್ತರ ಪ್ರದೇಶದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮದುವೆಯ ಒಂದು ದಿನ ಮೊದಲು ವಿಪರೀತವಾಗಿ ಕುಡಿದು ಮಲಗಿದ್ದಾನೆ. ಮರುದಿನ ಅಂದರೆ ಸೋಮವಾರ ಆತನ ಮದುವೆ ನೆಡೆಯಬೇಕಿತ್ತು. ಸರಿಯಾದ ಹೊತ್ತಿಗೆ ತಲುಪಿದ್ದರೆ ಆತನ ಮದುವೆ ನಡೆಯುತ್ತಿತ್ತು. ಆದರೆ ಕುಡಿದು ಮಲಗಿದಾತನಿಗೆ ನಾಳೆ ತನ್ನ ಮದುವೆ ಅನ್ನೋದೇ ಮರೆತು ಹೋಗಿದೆ.!
ಮಂಟಪದಲ್ಲಿ ಎಲ್ಲ ತಯಾರಿಯೊಂದಿಗೆ ವಧುವಿನ ಕುಟುಂಬದವರು ಕಾಯುತ್ತಿದ್ದಾರೆ. ವಧು ಗಂಡನ ಮನೆಗೆ ಹೋಗಲು ಶೃಂಗಾರಗೊಂಡು ಕಾಯುತ್ತಿದ್ದಾಳೆ. ಭಾನುವಾರ ರಾತ್ರಿ ಕುಡಿದು ಮಲಗಿದ ವರ ಮದುವೆಯ ದಿನವನ್ನೇ ಮರೆತು ಇಡೀ ದಿನ ಮಲಗಿದ್ದಾನೆ. ಮಂಗಳ ವಾರ ಎದ್ದು ಸೀದಾ ವಧುವಿನ ಮನೆಗೆ ಹೋಗಿದ್ದಾರೆ.
ಇಂಥ ಕುಡುಕನೊಂದಿಗೆ ತಾನು ಜೀವನವನ್ನು ನಿಭಾಯಿಸಲಾರೆ ಎಂದು ವಧು ಮದುವೆಯನ್ನು ರದ್ದು ಮಾಡಿದ್ದಾಳೆ. ಮದುವೆ ಖರ್ಚಿಗಾಗಿ ಮಾಡಿದ ಹಣವನ್ನು ವಾಪಾಸ್ ನೀಡಿಯೆಂದು ವಧುವಿನ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
Related Articles
ಪೊಲೀಸರು ಎರಡೂ ಕುಟುಂಬವರನ್ನು ಕರೆಸಿ ವಿಚಾರವನ್ನು ಆಲಿಸಿ ಇತ್ಯರ್ಥ ಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.