Advertisement

Taipei: ಕಂಠಪೂರ್ತಿ ಕುಡಿದು ದೃಷ್ಟಿ ಕಳೆದುಕೊಂಡ!

12:50 AM Feb 12, 2024 | Pranav MS |

ತೈಪೆ: ಇದನ್ನು ನೀವು ನಂಬಲೇಬೇಕು! ವ್ಯಕ್ತಿಯೊಬ್ಬ ಗಂಟೆಗಟ್ಟಲೆ ಕುಳಿತು ಕಂಠ­ಪೂರ್ತಿ ಮದ್ಯ ಸೇವಿಸಿದ ಬಳಿಕ, ಹೊಟ್ಟೆ ಕೆಳಗೆ ಮಾಡಿಕೊಂಡು ಮಲಗಿ ಬೆಳಿಗ್ಗೆ ಏಳು ವಷ್ಟರಲ್ಲಿ ತನ್ನ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ! ಹೌದು, 44 ವರ್ಷ ವಯಸ್ಸಿನ ತೈವಾನ್‌ನ ವ್ಯಕ್ತಿಯೊಬ್ಬ ಕಣ್ಣಿನ ಬಾಧೆ ತಾಳ­ಲಾರದೆ ನೇತ್ರ ತಜ್ಞರನ್ನು ಸಂದರ್ಶಿಸಿದ್ದಾನೆ.

Advertisement

ನಿರಂತರವಾಗಿ ಗಂಟೆಗಟ್ಟಲೆ ಕುಡಿಯುವ ಸಂದರ್ಭದಲ್ಲಿ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹಾಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next