Advertisement

ಡ್ರಗ್ಸ್‌ ಹಾವಳಿ ತಡೆಗಟ್ಟಿ : ಸಾರ್ವಜನಿಕರ ಆಗ್ರಹ

01:13 AM Jul 08, 2019 | mahesh |

ಸುರತ್ಕಲ್: ಇಲ್ಲಿನ ಶಾಲಾ ಕಾಲೇಜು ಪರಿಸರದಲ್ಲಿ ಡ್ರಗ್ಸ್‌ ಹಾವಳಿ ತಡೆಗಟ್ಟಬೇಕು, ಹೋಮ್‌ ಸ್ಟೇ, ಬೀಚ್ ರೆಸಾರ್ಟ್‌ಗಳ ಮೇಲೆ ನಿಗಾ ಇಡಬೇಕು, ಹಾಳಾದ ಸಿಸಿ ಟಿವಿ ದುರಸ್ತಿಪಡಿಸಿ, ದನ ಗಳ್ಳತನದ ಬಗ್ಗೆ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸುರತ್ಕಲ್ ಪೊಲೀಸ್‌ ಠಾಣಾ ವ್ಯಾಪ್ತಿಯ ಬೀಟ್ ಪೊಲೀಸ್‌ ಸಭೆಯಲ್ಲಿ ರವಿವಾರ ಒತ್ತಾಯಿಸಿದರು.

Advertisement

ಕುಳಾಯಿಯ ಬೀಟ್ ಸದಸ್ಯ ಯೋಗೀಶ್‌ ಸನಿಲ್ ಕುಳಾಯಿ ಮಾತನಾಡಿ, ಹೆದ್ದಾರಿ ಸಹಿತ ವಿವಿಧೆಡೆ ಹಾಕಲಾದ ಸಿಸಿಟಿವಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಹಿಳೆಯರು ಒಬ್ಬರು ಅಪರಿಚಿತ ಸೇಲ್ಸ್ಮ್ಯಾನ್‌ಗಳ ಬಗ್ಗೆ ಗಮನ ಸೆಳೆದು ಕೆಲವು ಬಾರಿ ಅವರ ವರ್ತನೆಗಳು ಅನು ಮಾನಾಸ್ಪದವಾಗಿರುತ್ತವೆ. ಪೊಲೀಸರು ಅಂತಹವರಿಗೆ ಗುರುತು ಚೀಟಿ ನೀಡುವಂತೆ ಮನವಿ ಮಾಡಿದರು.

ದನ ಕಳವು ತಡೆಗೆ ಕ್ರಮ ಕೈಗೊಳ್ಳಿ
ಇಡ್ಯಾದ ಗಿರಿಯಪ್ಪ ಮಾತನಾಡಿ, ದನ ಕಳವು ಪ್ರಕರಣಗಳನ್ನು ತಡೆಯಲು ಸಮರ್ಪಕ ಕ್ರಮ ಕೈಗೊಳ್ಳಬೇಕು. ಪೊಲೀಸರು ಆರೋಪಿಗಳನ್ನು ಹಿಡಿದರೂ ಶಿಕ್ಷೆಯಾಗುವುದು ಅಪರೂಪ. ಇದಕ್ಕೆ ಪರ್ಯಾಯ ಕ್ರಮ ಸಾಧ್ಯವೆ ಎಂದು ಪ್ರಶ್ನಿಸಿದರು.

ಎನ್‌ಐಟಿಕೆ ಬಳಿ ಮಧ್ಯರಾತ್ರಿ ವರೆಗೆ ಗೂಡಂಗಡಿಗಳು ವ್ಯಾಪಾರ ಮಾಡುತ್ತವೆ, ಇದಲ್ಲದೆ ಸುತ್ತಮುತ್ತ ಅಮಲು ಪದಾರ್ಥಗಳು ಹೇಗೆ ಸಿಗುತ್ತವೆ. ಈ ಬಗ್ಗೆ ವ್ಯಾಪಾರಕ್ಕೆ ಸಮಯ ನಿಗದಿ ಪಡಿಸಬೇಕು ಎಂದು ಮಾಜಿ ಕಾರ್ಪೊರೇಟರ್‌ ರೇವತಿ ಪುತ್ರನ್‌ ಒತ್ತಾಯಿಸಿದರು.

Advertisement

ಪುಷ್ಪರಾಜ್‌ ಕುಡುಂಬೂರು ಅವರು ಬೈಕುಗಳಲ್ಲಿ ಮೂರು ಜನ ಹೆಲ್ಮೆಟ್ ಇಲ್ಲದೆ ಓಡಾಟ, ಒಳ ರಸ್ತೆಗಳಲ್ಲಿ ಓವರ್‌ಸ್ಪೀಡ್‌ ಸಂಚಾರ ಮತ್ತಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಗಮನಸೆಳೆದರು.

ದುರಸ್ತಿಗೆ ಕ್ರಮ
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಣಂಬೂರು ಪೊಲೀಸ್‌ ಉಪವಿಭಾಗದ ಸಹಾಯಕ ಆಯುಕ್ತ ಶ್ರೀನಿವಾಸ ಗೌಡ ಅವರು, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಕೆಗೆ ಕ್ರಮ ಕೈಗೊ ಳ್ಳಲಾಗಿದೆ ಈಗಾಗಲೇ ಸಿಸಿಟಿವಿ ಉಪಕರಣ ಗಳು ಬಂದಿವೆ. ಸಿಸಿಟಿವಿಗಳು ಹಾಳಾದ ಕಡೆ ದುರಸ್ತಿಗೆ ಕ್ರಮಕೊಳ್ಳಲಾಗಿದೆ ಎಂದರು.

ದನ ಕಳವು ಸಂಬಂಧಪಟ್ಟಂತೆ ರೈತರು ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳ ಬಾರದು. ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಲಾಗುವುದು. ಪಣಂಬೂರು ಠಾಣಾ ವ್ಯಾಪ್ತಿಯ ಗೆಸ್ಟ್‌ ಹೌಸ್‌, ಹೋಂಸ್ಟೇ ಮೇಲೆ ನಿಗಾ ಇಡಲಾಗಿದೆ. ಯಾವುದೇ ಅತಿರೇಕದ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದರು.

ಪೋಲಿಸರ ಮೇಲೆ ಹಲ್ಲೆಗಳು ನಡೆಯುತ್ತಿರುವುದು ವಿಷಾದನೀಯ. ಆದರೆ ಅಪರಾಧ ಮಾಡಿದವರ ಮೇಲೆ ನಾವು ಕಠಿನ ಕಾನೂನು ಕೈಗೊಳ್ಳದೆ ಬಿಡುವುದಿಲ್ಲ . ಕೆಲವು ಬಾರಿ ಪೊಲೀಸರು ನಿಷ್ಠೆಯಿಂದ ನಮ್ಮ ಕರ್ತವ್ಯ ಮಾಡಿದರೂ ತಪ್ಪು ಸಂದೇಶ ರವಾನೆಯಾಗಿ ಆರೋಪಿಯನ್ನು ವೈಭವೀಕರಿಸಲಾಗುತ್ತದೆ ಎಂದು ಸಹಾಯಕ ಆಯುಕ್ತ ಶ್ರೀನಿವಾಸ ಗೌಡ ಬೇಸರ ವ್ಯಕ್ತಪಡಿಸಿದರು. ಪೊಲೀಸ್‌ ಠಾಣೆಯಲ್ಲಿ ಪೊಲೀಸರ ದುರ್ನಡತೆ ಕಂಡುಬಂದರೆ ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ, ಮುಂದೆ ಈ ರೀತಿ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು. ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕಲು ಪೊಲೀಸರೊಂದಿಗೆ ಸಹಕರಿಸಿ ಎಂದರು.

ಅಪರಾಧಿಗಳ ವಿರುದ್ಧ ಕಠಿನ ಕ್ರಮ

Udayavani is now on Telegram. Click here to join our channel and stay updated with the latest news.

Next