Advertisement

ಬಾಲಿವುಡ್ ನಟರು ಮತ್ತು ಡ್ರಗ್ಸ್ ; ಬಾಬಾ ರಾಮ್ ದೇವ್ ಹೇಳಿಕೆ ವೈರಲ್

07:43 PM Oct 16, 2022 | Team Udayavani |

ಮೊರಾದಾಬಾದ್: ಬಾಲಿವುಡ್ ನ ಟಾಪ್ ನಟರು ಡ್ರಗ್ಸ್ ಸೇವಿಸುತ್ತಾರೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಆರೋಪಿಸಿದ್ದಾರೆ. ಅವರ ಹೇಳಿಕೆಗಳ ವಿಡಿಯೋ ತುಣುಕುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Advertisement

ಇದನ್ನೂ ಓದಿ : ಶಾಲಾ ಬಸ್‌ ಸೀಟಿನಡಿ ದೈತ್ಯ ಹೆಬ್ಬಾವು ಪ್ರತ್ಯಕ್ಷ: ಕಾರ್ಯಚರಣೆ ವಿಡಿಯೋ ವೈರಲ್

ಮೊರಾದಾಬಾದ್‌ನಲ್ಲಿ ಶನಿವಾರ ನಡೆದ ಆರ್ಯವೀರ ಮತ್ತು ವೀರಾಂಗಣ ಸಮಾವೇಶದಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್, ಸಲ್ಮಾನ್ ಖಾನ್ ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ಅಮೀರ್ ಖಾನ್ ಬಗ್ಗೆ ನನಗೆ ಗೊತ್ತಿಲ್ಲ, ಶಾರುಖ್ ಖಾನ್ ಅವರ ಮಗ ಡ್ರಗ್ಸ್ ಸೇವಿಸುವಾಗ ಸಿಕ್ಕಿಬಿದ್ದು ಜೈಲಿನಲ್ಲಿದ್ದ. ನಟಿಯರ ಬಗ್ಗೆ ದೇವರಿಗೆ ಮಾತ್ರ ತಿಳಿದಿದೆ ಎಂದು ಹೇಳಿದ್ದರು.

ನಂತರ ಮಾತನಾಡಿದ ಅವರು, ಚಿತ್ರರಂಗದಲ್ಲಿ ಡ್ರಗ್ಸ್ ಇದೆ, ರಾಜಕೀಯದಲ್ಲೂ ಡ್ರಗ್ಸ್ ಇದೆ, ಚುನಾವಣೆ ಸಂದರ್ಭದಲ್ಲಿ ಮದ್ಯ ಹಂಚಲಾಗುತ್ತದೆ, ಪ್ರತಿಯೊಂದು ಮಾದಕ ವ್ಯಸನದಿಂದ ಭಾರತ ಮುಕ್ತವಾಗಬೇಕು ಎಂಬ ಸಂಕಲ್ಪ ಮಾಡಬೇಕು.ಇದಕ್ಕಾಗಿ ಚಳವಳಿ ನಡೆಸುತ್ತೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next