ಶಾಲಾ ಮಕ್ಕಳ ಮೇಲೆ ಡ್ರಗ್ಸ್ ಪ್ರಭಾವದ ಬಗ್ಗೆ ಸುಪ್ರೀಂ ಕಳವಳ
Advertisement
ಹೊಸದಿಲ್ಲಿ: ದೇಶದಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ತುರ್ತಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ತರುವಂತೆ ದೇಶದ ಪ್ರತಿಷ್ಠಿತ ಆಸ್ಪತ್ರೆ ಅಖೀಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಗೆ ಸೂಚನೆ ನೀಡಿದೆ. ಸೆ.7ರೊಳಗೆ ಮಾದಕ ವ್ಯಸನ ನಿಯಂ ತ್ರಣ ಸಂಬಂಧ ವರದಿ ನೀಡಲೇಬೇಕು. ಜತೆಗೆ ಈಗ ನೀಡಲಾ ಗಿರುವ ಅವಧಿಯನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಮುಖ್ಯ ನ್ಯಾ| ದೀಪಕ್ ಮಿಶ್ರಾ, ನೇತೃತ್ವದ ಪೀಠ ಆದೇಶ ನೀಡಿದೆ. ಕೇಂದ್ರ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮನೀಂದರ್ ಸಿಂಗ್ ಅವರಿಗೆ ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಕೇಂದ್ರ ಸರಕಾರ ಮತ್ತು ಏಮ್ಸ್ ಪಾಲಿಸಲೇಬೇಕು ಎಂದು ಹೇಳಿದೆ. ಇದನ್ನು ರಾಷ್ಟ್ರೀಯ ಮಹತ್ವದ ವಿಚಾರ ಎಂದು ಪರಿಗಣಿಸಿ ಅಗತ್ಯ ಕಾರ್ಯಸೂಚಿ ತನ್ನಿ ಎಂದಿದೆ. ಮನೀಂದರ್ ಸಿಂಗ್ ಹೇಳಿಕೆ ಯಂತೆ ನಾವೀಗ ಏಮ್ಸ್‌ನ ಉನ್ನತಾಧಿಕಾರ ಸಮಿತಿಯು ಸೆ.7 ಅಥವಾ ಅದಕ್ಕೂ ಮುನ್ನವೇ ಡ್ರಗ್ಸ್ ವ್ಯಸನ ಸಮಸ್ಯೆ ಮುಕ್ತ ಮಾಡುವ ವರದಿ ಅಂತಿಮಗೊಳಿಸಬೇಕು ಎಂದು ಪೀಠ ಹೇಳಿದೆ.