Advertisement

ಡ್ರಗ್ಸ್‌ ಪ್ರಕರಣ: ಸಂಜನಾ, ರಾಗಿಣಿ ತಲೆಕೂದಲು ಪರೀಕ್ಷೆಗೆ ಹೈಕೋರ್ಟ್‌ ಅನುಮತಿ

02:50 PM Dec 05, 2020 | keerthan |

ಬೆಂಗಳೂರು: ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಐವರು ಆರೋಪಿಗಳ ತಲೆಕೂದಲು ಮಾದರಿ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.

Advertisement

ತಲೆಕೂದಲ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಆರೋಪಿಗಳು ಸಹಕರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಆರೋಪಿಗಳ ತಲೆಕೂದಲ ಸಂಗ್ರಹಕ್ಕೆ ಅನುಮತಿ ನೀಡುವಂತೆ ಸಿಸಿಬಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ಸಿಸಿಎಚ್‌ 33ನೇ ನ್ಯಾಯಾಲಯ, ಆರೋಪಿಗಳಾದ ರಾಗಿಣಿ, ಸಂಜನಾ, ರಾಹುಲ್‌ ತೋನ್ಸೆ, ಲೂಮ್‌ ಪೆಪ್ಪರ್‌, ರಿಯಾಜ್‌ ಮೊಹಮದ್‌, ತಲೆಕೂದಲು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಿ ಶುಕ್ರವಾರ ಆದೇಶ ನೀಡಿದೆ.

ತಲೆಕೂದಲು ಪರೀಕ್ಷೆ ಏಕೆ?: ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಸೇರಿದಂತೆ ಐವರು ಆರೋಪಿಗಳು ಹಲವು ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದು, ಮಾದಕ ವಸ್ತು ಸೇವನೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅವರು ಮಾದಕ ವಸ್ತು ಸೇವಿಸಿರುವುದು ಖಚಿತ ಪಡಿಸಿಕೊಳ್ಳಲು ಅವರ ತಲೆಕೂದಲನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕಿದೆ.

ಇದನ್ನೂ ಓದಿ:ಕುಮಾರಸ್ವಾಮಿಗೆ ಈಗ ಜ್ಞಾನೋದಯವಾಗಿದೆ, ಇನ್ನಾದರೂ ಕಾಂಗ್ರೆಸ್ ಸಹವಾಸ ಬಿಡಲಿ : ಸಿ ಟಿ ರವಿ

Advertisement

ಮಾದಕ ವಸ್ತು ಸೇವಿಸಿದವರ ತಲೆಕೂದಲಲ್ಲಿ ಹಲವು ತಿಂಗಳುಗಳ ಕಾಲ ಮಾದಕ ವಸ್ತುವಿನ ಅಂಶಗಳು ಅಡಗಿರುತ್ತವೆ. ಹೀಗಾಗಿ, ಆರೋಪಿಗಳ ಮಾದಕ ವಸ್ತು ಸೇವಿಸಿದ್ದರೇ ಎಂಬುದು ಧೃಡಪಡಿಸಬೇಕು. ಅದನ್ನು ದೋಷಾರೋಪ ಪಟ್ಟಿಯಲ್ಲೂ ರುಜುವಾತುಪಡಿಸಬೇಕು.

ಈ ನಿಟ್ಟಿನಲ್ಲಿ ಅವರ ತಲೆಕೂದಲಿನ ಮಾದರಿ ತೆಗೆದುಕೊಳ್ಳಲು ಆರೋಪಿಗಳು ಸಹಕರಿಸಿರಲಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆರೋಪಿಗಳ ವಿರುದ್ಧ ಈಗಾಗಲೇ ತನಿಖೆಯಲ್ಲಿ ಹಲವು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಕೂದಲ ಪರೀಕ್ಷೆಗೆ ಅನುಮತಿ ದೊರೆತಿದ್ದು, ತಲೆಕೂದಲ ಮಾದರಿ ಸಂಗ್ರಹಿಸಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next