Advertisement

ಮಾದಕ ವಸ್ತು ಕಾರ್ಯಾಗಾರ

11:34 AM Nov 18, 2017 | Team Udayavani |

ಕೊಡಿಯಾಲ್‌ಬೈಲ್‌: ಚೈಲ್ಡ್‌ ಲೈನ್‌ ಸೆ ದೋಸ್ತಿ-2017 ಸಪ್ತಾಹದ ಅಂಗವಾಗಿ ಆನ್‌ಲೈನ್‌ ಸೇಫ್ಟಿ  ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಸಲುವಾಗಿ ಮಾಹಿತಿ ಕಾರ್ಯಾಗಾರವನ್ನು ಇತ್ತೀಚೆಗೆ ನಗರದ ಬಲ್ಮಠ ಮಹಿಳಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

Advertisement

ಮುಖ್ಯ ಅತಿಥಿ ಇಕೋನೋಮಿಕ್‌ ಮತ್ತು ನಾರ್ಕೊಟಿಕ್‌ ಪೊಲೀಸ್‌ ನಿರೀಕ್ಷಕ ಮಹಮ್ಮದ್‌ ಶರೀಫ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಫೇಸ್‌ಬುಕ್‌, ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು ತಮಗೆ ಅರಿವಿಲ್ಲದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಆದ್ದರಿಂದ ಆದಷ್ಟು ಮಟ್ಟಿಗೆ ಸಾಮಾಜಿಕ ಜಾಲತಾಣಗಳಿಂದ ಎಚ್ಚರವಾಗಿರಬೇಕೆಂಬುದಾಗಿ ಸೂಚಿಸಿದರು.

ಉದ್ಘಾಟಿಸಿದ ಮಂಗಳೂರು ಚೈಲ್ಡ್‌ ಲೈನ್‌ ಕೇಂದ್ರ ಸಂಯೋಜನಾಧಿಕಾರಿ ದೀಕ್ಷಿತ್‌ ಅಚ್ರಪ್ಪಾಡಿ ಮಾತನಾಡಿ, ಚೈಲ್ಡ್‌ ಲೈನ್‌ ಸೆ ದೋಸ್ತಿ-2017 ಸಪ್ತಾಹದ ಅಂಗವಾಗಿ ನ. 20ರ ವರೆಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ತಾಲೂಕಿನಾದ್ಯಂತ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಲಿಂಕ್‌ ಡಿ ಎಡಿಕ್ಷನ್‌ ಸಂಸ್ಥೆಯ ಆಡಳಿತಾಧಿಕಾರಿ ಲೀಡಿಯಾ ಲೋಬೋ ಮಾತನಾಡಿ, ಮಾದಕ ವಸ್ತುಗಳ ಸೇವನೆಯು ಕೆಟ್ಟ ಚಟವಾಗಿದ್ದು, ನಿರಂತರ ಮಾದಕ ವಸ್ತುಗಳನ್ನು ಸೇವಿಸುವ ವ್ಯಕ್ತಿ ಅದರಿಂದ ಹೊರ ಬರಲು ಕಷ್ಟಪಡುತ್ತಾನೆ ಹಾಗೂ ಜೀವನದ ಮೌಲ್ಯಗಳನ್ನು ಕಳೆದುಕೊಳ್ಳುತ್ತಾನೆ ಎಂದು ವಿವರಿಸಿದರು.

ನೋಡಲ್‌ ಸಂಯೋಜಕ ಯೋಗಿಶ್‌ ಮಲ್ಲಿಗೆ ಮಾಡು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುರೇಖಾ, ಕಾಣೆಯಾದ ಮಕ್ಕಳ ಬ್ಯೂರೋದ ಯೋಗಿಶ್‌, ಚೈಲ್ಡ್‌ಲೈನ್‌ ತಂಡದ ಸದಸ್ಯ ನಾಗರಾಜ್‌ ಪಣಕಜೆ, ರೇವತಿ, ಜಯಂತಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಮಾರಿಯಟ್‌ ಮಸ್ಕರೇನಸ್‌ ಸ್ವಾಗತಿಸಿದರು. ಆಶಾಲತಾ ಕುಂಪಲ ನಿರೂಪಿಸಿದರು ಹಾಗೂ ಅಸುಂತ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next