Advertisement
ಪೊಲೀಸರು ಗಸ್ತು ನಿರತರಾಗಿದ್ದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ದ್ರವ್ಯವನ್ನು ಸೇವಿಸಿ ಅನುಚಿತ ವರ್ತನೆ ತೋರಿದ ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿಗಳಾದ ಮಹಮ್ಮದ್ ಸಫೀಕ್ (24) ಹಾಗೂ ಅಬ್ದುಲ್ ಸಲೀಂ (24)ನನ್ನು ವಶಕ್ಕೆ ಪಡೆದು ವಿಚಾರಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಂಗಳೂರು: ನಿಷೇಧಿತ ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಕಾಸರಗೋಡಿನ ಮೊಹಮ್ಮದ್ ಇರ್ಫಾನ್ (20)ನನ್ನು ರವಿವಾರ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ವೆಲೆನ್ಸಿಯಾ ಶ್ಮಶಾನದ ಬಳಿ ವಶಕ್ಕೆ ಪಡೆದಿದ್ದಾರೆ.