Advertisement
ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿರುವ ಈ ಮೂವರು ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಐಷಾರಾಮಿ ಜೀವನಕ್ಕಾಗಿ ನೆರೆ ರಾಜ್ಯಗಳ ಮಧ್ಯವರ್ತಿಗಳಿಂದ ಗಾಂಜಾ ಹಾಗೂ ಕೊಕೇನ್ ತರಿಸಿ ಇಲ್ಲಿನ ಕಾಲೇಜು ವಿದ್ಯಾರ್ಥಿಗಳು, ತಮ್ಮ ಪರಿಚಿತ ವ್ಯಕ್ತಿಗಳಿಗೆ ಗ್ರಾಂ. ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಹೆಣ್ಣೂರಿನಲ್ಲಿ ವಾಸವಾಗಿದ್ದ. ನೆರೆ ರಾಜ್ಯಗಳಿಂದ ಗಾಂಜಾ ತರಿಸಿ ಅವುಗಳನ್ನು ಸಣ್ಣ-ಸಣ್ಣ ಪ್ಯಾಕೇಟ್‌ಗಳನ್ನಾಗಿ ಮಾಡಿ ವಿದಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೆ.13ರಂದು ಆರೋಪಿಯನ್ನು ಹೆಣ್ಣೂರಿನ ಚಿನ್ನಪ್ಪ ಲೇಔಟ್‌ನಲ್ಲಿ ಬಂಧಿಸಿದ್ದು, ಆರೋಪಿಯಿಂದ 40 ಸಾವಿರ ರೂ. ಮೌಲ್ಯದ 1 ಕೆ.ಜಿ. ಗಾಂಜಾ, 1 ಮೊಬೈಲ್, ಪ್ಲಾಸ್ಟಿಕ್ ಕವರ್ ಮತ್ತು 500 ರೂ. ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಅಜಂ ನೈಜರ್ (21) ಎಂಬಾತನನ್ನು ಬಂಧಿಸಿದ್ದು, ಈತನಿಂದ 1 ಲಕ್ಷ ರೂ. ಮೌಲ್ಯದ 1 ಕೆ.ಜಿ. ಗಾಂಜಾ, 1 ಮೊಬೈಲ್, 1 ಬೈಕ್, ನಗದು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಹೆಣ್ಣೂರು ಬಂಡೆ ಬಳಿಯ ಶ್ರೀಭೈರವೇಶ್ವರ ಕಾಂಡಿಮೆಂಟ್ಸ್ ಮುಂಭಾಗ ಸಣ್ಣ-ಸಣ್ಣ ಪ್ಯಾಕೆಟ್‌ಗಳಲ್ಲಿ ಸಾರ್ವಜನಿಕವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಎಸಿಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಈ ದಾಳಿಗಳು ನಡೆದಿವೆ.