Advertisement

ಕುಂದಾಪುರದಲ್ಲಿ ಶೀಘ್ರ ಆರಂಭವಾಗಲಿದೆ ಜನರಿಗೆ ಕೈಗಟಕುವ ದರದಲ್ಲಿ ಔಷಧ

03:48 PM Feb 27, 2017 | Team Udayavani |

ಕುಂದಾಪುರ: ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಸುವ ಮಹತ್ತರ ಆಕಾಂಕ್ಷೆಯಂತೆ ಜನಸೇವೆಯ ಕೈಂಕರ್ಯವನ್ನು ಹೊತ್ತ ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ಕುಂದಾಪುರ ಘಟಕದ‌  ನೇತೃತ್ವದಲ್ಲಿ  ಕೇಂದ್ರ ಸರಕಾರದ ಜನೌಷಧ ಯೋಜನೆಯಡಿಯಲ್ಲಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಬಳಿಯಲ್ಲಿ  ಪ್ರಧಾನಮಂತ್ರಿ ಜನೌಷಧ ಮಳಿಗೆ ಶೀಘ್ರದಲ್ಲಿ  ಆರಂಭಗೊಳ್ಳಲಿದೆ.

Advertisement

ಜನೌಷಧ ಮಳಿಗೆಯ ಮಹತ್ವ 
ಕಡಿಮೆ ದರದಲ್ಲಿ ಔಷಧ ಮಾರಾಟ ಮಾಡುವ ಪ್ರಧಾನ ಮಂತ್ರಿ ಜನೌಷಧ  ಮಳಿಗೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಚರಿಸುವ ಯೋಜನೆಯಾಗಿದ್ದರೂ ಉಡುಪಿ ಹಾಗೂ ಮಂಗಳೂರಿನಲ್ಲಿ ಇನ್ನೂ ಚಾಲನೆ ದೊರಕಿಲ್ಲ. ಆದರೆ ತಾಲೂಕು ಕೇಂದ್ರದಲ್ಲಿ ಪಪ್ರಥಮವಾಗಿ ಕುಂದಾಪುರದಲ್ಲಿ ಕಾರ್ಯಾಚರಿಸುತ್ತಿದೆ. ಜನೌಷಧಿಧ ಅಂಗಡಿಗಳಲ್ಲಿ ಸಿಗುವ ಔಷಧಿಧಗಳು ಇತರೆಡೆಗಳಿಗಿಂತ ಗರಿಷ್ಠ ಶೇ. 70ರಷ್ಟು ಕಡಿಮೆ ಬೆಲೆಗೆ ಲಭ್ಯವಾಗಲಿವೆ. ಜನೌಷಧ ಮಳಿಗೆಗಳಲ್ಲಿ 1 ಸಾವಿರಕ್ಕೂ ಅಧಿಧಿಕ ವಿಧದ ಜೀವ ರಕ್ಷಕ ಔಷಧಗಳು ಶೇ.60ರಿಂದ 80ರಷ್ಟು ರಿಯಾಯಿತಿಯಲ್ಲಿ ದೊರೆಯಲಿ. ರಾಜ್ಯದ 17 ಕಡೆಗಳಲ್ಲಿ ಜನೌಷಧ ಮಳಿಗೆಗಳ ಕಾಮಗಾರಿ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಏಳು ಮಳಿಗೆಗಳನ್ನು ರೆಡ್‌ಕ್ರಾಸ್‌ ಸಂಸ್ಥೆ ನಡೆಸಲಿದೆ. ಕುಂದಾಪುರ ಸರಕಾರಿ ಆಸ್ಪತ್ರೆಯ ಜಾಗದಲ್ಲಿ ಈ ಮಳಿಗೆಯನ್ನು ಆರಂಭಿಸಲು ಸ್ಥಳಾವಕಾಶವನ್ನು ಪಡೆದಿದ್ದು ಈಗಾಗಲೇ ಈ ಮಳಿಗೆಯ ಕಾಮಗಾರಿಗೆ ಸುಮಾರು 3 ಲಕ್ಷ ರೂ ವ್ಯಯಿಸಲಾಗಿದೆ.

ರಾಜ್ಯದಲ್ಲಿ 200 ಔಷಧ ಮಳಿಗೆಗಳು
ಬಡ ಜನರಿಗೆ ಉತ್ತಮ ಗುಣಮಟ್ಟದ ಔಷಧಗಳು ಕೈಗೆಟಕುವ ದರದಲ್ಲಿ  ದೊರಕುವ ಸಲುವಾಗಿ ಕೇಂದ್ರಸರಕಾರದ ಪ್ರಧಾನ ಮಂತ್ರಿ ಜನೌಷಧ  ಮಳಿಗೆಯನ್ನು ಸ್ಥಾಪಿಸಿದ್ದು, ರಾಜ್ಯದಲ್ಲಿ  ಸುಮಾರು 200 ಮಳಿಗೆಯನ್ನು ಸ್ಥಾಪಿಸಲು ಯೋಜಿಸಲಾಗಿದೆ.  ಮಳಿಗೆಯ ನಿರ್ವಹಣೆಯನ್ನು  ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಆ್ಯಂಡ್‌ ಎಂಡ್‌ ಹೌಸಿಂಗ್‌  ಸೊಸೈಟಿ ಮತ್ತು ಇಂಡಿಯನ್‌ ರೆಡ್‌ಕ್ರಾಸ್‌ ಸಂಸ್ಥೆ  ಮಾಡಲಿವೆ.

ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಈಗಾಗಲೇ ಜನೌಷಧ  ಮಳಿಗೆಗಳನ್ನು ಆರಂಭಿಸಲಾಗುತ್ತಿದೆ.  ಈ ಮಳಿಗೆಗೆ ಬೇಕಾಗುವ ಸ್ಥಳವನ್ನು ನೀಡಿದ್ದು ರೆಡ್‌ಕ್ರಾಸ್‌ ಸಂಸ್ಥೆಯು ಕಟ್ಟಡವನ್ನು ಕಟ್ಟಿಕೊಂಡು ಇದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆರಂಭಿಕವಾಗಿ 1 ಲಕ್ಷ ರೂ.  ಮೌಲ್ಯದ ಔಷಧಗಳನ್ನು  ಸರಬರಾಜು ಮಾಡಲು,  ರೂ.ಲಕ್ಷ  ಈ ಮಳಿಗೆಯನ್ನು ಸ್ಥಾಪನೆ ಮಾಡಲು ಹಾಗೂ ರೂ. 50 ಸಾವಿರ ಕಂಪ್ಯೂಟರ್‌  ಹಾಗೂ ಪೀಠೊಪಕರಣಗಳನ್ನು  ಒದಗಿಸಲು  ಸರಕಾರ ಆರ್ಥಿಕ ನೆರವು ನೀಡಲಿದೆ.  ಅಲ್ಲದೆ ಈ ಮಳಿಗೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ.
-ಡಾ| ಉದಯಶಂಕರ್‌, ಮುಖ್ಯ ವೈದ್ಯಾಧಿಕಾರಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆ

ಇಂದು ಔಷಧಗಳ ದರ  ಗಗನಕ್ಕೇರುತ್ತಿರುವ ಈ ಕಾಲದಲ್ಲಿ  ಜನಸಾಮಾನ್ಯರಿಗೆ   ಕೈಗೆಟಕುವ  ದರದಲ್ಲಿ  ಔಷಧಗಳನ್ನು  ಒದಗಿಸುವ ನಿಟ್ಟಿನಲ್ಲಿ ಕೇಂದ್ರಸರಕಾರದ  ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಜನೌಷಧ  ಮಳಿಗೆಯನ್ನು ° ಕುಂದಾಪುರದಲ್ಲಿ   ಮುಂದಿನ ವಾರದಿಂದ ಆರಂಭಿಸಲಾಗುವುದು. ಶೇ. 20ರಿಂದ  70ರ ತನಕ  ರಷ್ಟು  ಕಡಿಮೆ  ದರದಲ್ಲಿ  ಔಷಧಗಳು ಇಲ್ಲಿ ದೊರೆಯಲಿದ್ದು, ಈ ಔಷಧ ಮಳಿಗೆಯ ನಿರ್ವಹಣೆಯನ್ನು ರೆಡ್‌ಕ್ರಾಸ್‌ ಕುಂದಾಪುರ ಘಟಕ  ಮಾಡಲಿದೆ.
-ಜಯಕರ್‌ ಶೆಟ್ಟಿ, ಅಧ್ಯಕ್ಷರು,  ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ  ಕುಂದಾಪುರ  ಘಟಕ

Advertisement

– ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next