Advertisement

ಮಂಗಳೂರು: ಡ್ರಗ್ ಪೆಡ್ಲರ್ ಗಳ ಪರೇಡ್, ಖಡಕ್ ಎಚ್ಚರಿಕೆ ನೀಡಿದ ಕಮಿಷನರ್

02:02 PM Sep 07, 2020 | keerthan |

ಮಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಸ್ಪೋಟಕ ಸಂಗತಿ ಹೊರ ಬರುತ್ತಿದ್ದಂತೆ ಮಂಗಳೂರು ಪೊಲೀಸರು ಕೂಡಾ ಮಾದಕ ವಸ್ತು ಜಗತ್ತಿನ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

Advertisement

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಗಾಂಜಾ ಸಾಗಾಟದ ಆರೋಪಿಗಳನ್ನು ಇಂದು ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಪರೇಡ್ ನಡೆಸಲಾಯಿತು. ಮಂಗಳೂರು ಹಾಗೂ ಕಾಸರಗೋಡು ಮೂಲದ ನೂರಕ್ಕೂ ಹೆಚ್ಚು ಆರೋಪಿಗಳ ಪರೇಡ್ ನಡೆಸಿದ್ದು, ಪ್ರತೀ ಆರೋಪಿಯನ್ನು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಚಾರಣೆ ನಡೆಸಿದರು.

ಇನ್ನು ಮುಂದೆ ಡ್ರಗ್ಸ್ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಕಠಿಣ ಕ್ರಮ ಜರುಗಿಸುವುದಾಗಿ ಆಯುಕ್ತರು ಆರೋಪಿಗಳಿಗೆ ಎಚ್ಚರಿಕೆ ನೀಡಿದರು. ಇಂದು ಸಂಜೆ ಇದೇ ಮೈದಾನದಲ್ಲಿ ಡ್ರಗ್ಸ್ ವ್ಯಸನಿಗಳ ಪರೇಡನ್ನೂ ಪೊಲೀಸರು ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next