ಮಂಗಳೂರು: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸರುವ ಮಂಗಳೂರು ಸಿಸಿಬಿ ಪೊಲೀಸರು ಇಂದು ಮತ್ತೊಬ್ಬ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ.
ಡ್ರಗ್ ಪೂರೈಕೆ ಮಾಡುತ್ತಿದ್ದ ಸೂರಿಂಜೆ ನಿವಾಸಿ ಮೊಹಮ್ಮದ್ ಶಾಕಿರ್ ಎಂಬಾತನನ್ನು ಬಂಧಿಸಿಲಾಗಿದೆ.
ಡ್ರಗ್ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಕಿಶೋರ್ ಶೆಟ್ಟಿ ಮತ್ತು ಆಕಿಲ್ ನೌಶೀನ್ ಅವರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಕಾರು: ಗರ್ಭಿಣಿ ಸೇರಿ ಏಳು ಜನರ ದುರ್ಮರಣ
ಇವರಿಗೆ ಡ್ರಗ್ಸ್ ಲಿಂಕ್ ಗಳನ್ನು ಈ ಮೊಹಮ್ಮದ್ ಶಾಕೀರ್ ಕೊಡಿಸಿದ್ದ ಎನ್ನಲಾಗಿದೆ. ಮಹಮ್ಮದ್ ಶಾಕೀರ್ ಗೆ ಸಂಬಂಧಿಸಿ ಇನ್ನಷ್ಟು ಜನರ ಅರೆಸ್ಟ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿರುವ ಕಿಶೋರ್ ಅಮನ್ ಮತ್ತು ತರುಣ್ ಜೊತೆ ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ಕಿರುತೆರೆ ನಿರೂಪಕಿ- ನಟಿ ಅನುಶ್ರೀಯನ್ನು ಶನಿವಾರ ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.