Advertisement
ಇದೇವೇಳೆ ಸ್ಯಾಂಡಲ್ ವುಡ್‌ನ ಕೆಲವು ಸ್ಟಾರ್ ಗಳು ಮಾದಕ ವಸ್ತು ಸೇವನೆ ಮಾಡುತ್ತಿದ್ದುದು ಸತ್ಯ ಎಂಬ ಹೇಳಿಕೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
Related Articles
ಅನಿಕಾ ಕೋಡ್‌ವರ್ಡ್‌ಗಳ ಮೂಲಕ ದಂಧೆ ನಡೆಸುತ್ತಿದ್ದಳು. ತನ್ನ ಸಾಮಾಜಿಕ ಜಾಲತಾಣದ ಖಾತೆ ಹೆಸರು ಕೂಡ ಬಿ-ಮನಿ ಎಂದಿದೆ. ಅಮೀನಮ್ ಖಾನ್ ಮೊಹಮ್ಮದ್ ಮೂಲಕ ದಂಧೆ ನಡೆಸುತ್ತಿದ್ದ ಈಕೆಯ ಸಬ್‌ಡೀಲರ್ ಡುಗಯ್ ಡುಂಜೋ ತಲೆಮರೆಸಿಕೊಂಡಿದ್ದಾನೆ.
Advertisement
ಅನಿಕಾ ಹಿನ್ನೆಲೆತಮಿಳುನಾಡು ಮೂಲದ ಅನಿಕಾ, ಹೊಟೇಲ್ ಮ್ಯಾನೇಜ್‌ಮೆಂಟ್ ಪದವಿ ಯಲ್ಲಿ ಅನುತ್ತೀರ್ಣಗೊಂಡಿದ್ದು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ದೊಡ್ಡಗುಬ್ಬಿಯಲ್ಲಿ ವಾಸವಾಗಿದ್ದಳು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಆ್ಯಂಡಿ ಎಂಬ ನೈಜೀರಿಯಾ ಪ್ರಜೆ ಪರಿಚಯವಾಗಿದ್ದ. ವಿದೇಶದಿಂದ ಬಟ್ಟೆ ರಫ್ತು ವ್ಯವಹಾರ ನಡೆಸುತ್ತಿದ್ದ ಈತ, ಅನಿಕಾ ಳನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ. ಈತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಲ್ಲಿ ಜೈಲು ಸೇರಿದ್ದಾನೆ. ಬಳಿಕ ಕಿರುತೆರೆಯಲ್ಲಿ ನಟಿಯಾಗಿದ್ದ ಆಕೆ, ನಿಧಾನವಾಗಿ ಸಿನೆಮಾ ಕಲಾವಿದರ ಪರಿಚಯ ಬೆಳೆಸಿಕೊಂಡಿದ್ದಳು. ಮನೆ ಸಮೀಪ ವಾಸವಾಗಿದ್ದ ನೈಜೀರಿಯಾ ಪ್ರಜೆಗಳ ಜತೆ ಓಡನಾಟ ಹೊಂದಿದ್ದªಳು. ಇಂದ್ರಜಿತ್‌ಗೆ ನೋಟಿಸ್
ನಟ-ನಟಿಯರು ಮತ್ತು ಸಂಗೀತಗಾರರಿಗೆ ಮಾದಕ ವಸ್ತು ಮಾರಾಟ ಸಂಬಂಧ ನಟ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚಂದನ ವನದ ಕೆಲವು ಸ್ಟಾರ್‌ಗಳು ಮಾದಕ ವಸ್ತು ಸೇವನೆ ಮಾಡುತ್ತಿ ರುವುದು ನಿಜ ಎಂದು ಇಂದ್ರಜಿತ್ ಮಾಧ್ಯಮ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ತಮಗೆ ಗೊತ್ತಿರುವ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಡ್ರಗ್ಸ್ ವಿರುದ್ಧ ಪೊಲೀಸರು ನಡೆಸುತ್ತಿರುವ ಹೋರಾಟಕ್ಕೆ ಸಹಕರಿಸಿ ಎಂದು ಕೋರಿದ್ದಾರೆ. ನಟಿಯರಿಂದಲೇ ಹೆಚ್ಚು ಬೇಡಿಕೆ
ಲೌಕ್ ಡೌನ್ ಸಂದರ್ಭ ನಟರಿಗಿಂತ ನಟಿಯರೇ ಹೆಚ್ಚು ಮಾದಕ ವಸ್ತು ಸೇವಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಈ ಚಟ ಅಂಟಿಸಿಕೊಂಡವರಲ್ಲಿ ಹೆಚ್ಚಿನವರು ಕ್ಲಾಸ್ -1 ಮಾದಕ ವಸ್ತುಗಳಿಗಾಗಿ ಬೇಡಿಕೆ ಇರಿಸುತ್ತಿದ್ದರು.
ಸಾಮಾನ್ಯವಾಗಿ ನಟಿಯರು ವೈನ್ ಸೇವಿಸುತ್ತಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಇಲ್ಲದ್ದರಿಂದ ಮಾದಕ ವಸ್ತುಗಳಿಗೇ ಶರಣಾಗಿದ್ದರು ಎಂದು ಮೂಲಗಳು ತಿಳಿಸಿವೆ.