Advertisement

ಬೇರೆ ದೇಶಗಳಲ್ಲಿ ಡ್ರಗ್ ನಿಷೇಧಿಸಿದಂತೆ ನಮ್ಮಲ್ಲೂ ನಿಷೇಧಿಸಿ : ಸಿಎಂ ಗೆ ನಟಿ ತಾರಾ ಮನವಿ

01:45 PM Sep 01, 2020 | sudhir |

ಬೆಂಗಳೂರು : ಪ್ರಪಂಚದ ಹಲವಾರು ದೇಶಗಳಲ್ಲಿ ಡ್ರಗ್ಸ್ ಸಂಪೂರ್ಣ ನಿಷೇಧಿಸಲಾಗಿದೆ ಹಾಗೆ ನಮ್ಮ ದೇಶ, ನಮ್ಮ ರಾಜ್ಯದಲ್ಲೂ ಡ್ರಗ್ ಮಾಫಿಯಾವನ್ನು ಸಂಪೂರ್ಣ ನಿಷೇಧಿಸಬೇಕೆಂದು ವಿಧಾನ ಪರಿಷತ್ ಸದಸ್ಯೆ ಹಾಗೂ ನಟಿ ತಾರಾ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ಇತ್ತೀಚಿಗೆ ಕೆಲವು ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಜನತೆ ಹಾಗೂ ಚಲನಚಿತ್ರ ರಂಗದ ಹಲವಾರು ಕಲಾವಿದರ ಮೇಲೆ ಡ್ರಗ್ ಸೇವನೆಯ ಆರೋಪ ಕೇಳಿಬರುತ್ತಿರುವುದು ವಿಷಾದನೀಯ ಈ ವಿಚಾರವಾಗಿ ಸರಕಾರ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಡ್ರಗ್ ಜಾಲದ ಬಗ್ಗೆ ಕಣ್ಣಿಡಲು ಎಲ್ಲಾ ಕ್ರಮಗಳನ್ನು ಕೈಗೂಡಿತ್ತು ಹಾಗೆನೆ ಈ ವಿಚಾರದಲ್ಲಿ ಸದನದಲ್ಲೂ ಚರ್ಚೆಗಳು ನಡೆದಿತ್ತು ಎಂದು ಹೇಳಿದ ಅವರು ಸರಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಸುಮಾರು 15 ರಿಂದ 24 ವರ್ಷದ ಯುವಕ ಯುವತಿಯರು ಇತ್ತೀಚಿನ ವರ್ಷದಲ್ಲಿ ಕೆಲವು (ಪ್ರತಿಷ್ಠಿತ) ಶಾಲಾ ಕಾಲೇಜುಗಳಲ್ಲಿ ಗಣನೀಯವಾಗಿ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ ಇದು ತುಂಬಾ ವಿಷಾದಕರ ಸಂಗತಿ ಹಾಗಾಗಿ ಇಂತಹ ದುಶ್ಚಟಗಳನ್ನು ನಿಯಂತ್ರಿಸಲು ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಮೂರು ತಿಂಗಳಿಗೊಮ್ಮೆ ಸಾಮಾಜಿಕ ಅರೋಗ್ಯ ತಪಾಸಣೆ ನಡೆಸುವುದು ಸೂಕ್ತ ಏಕೆಂದರೆ ಕೆಲವು ಮಾದಕ ವಸ್ತುಗಳನ್ನು ಸೇವಿಸಿದಾಗ ಅದು ನಮ್ಮ ರಕ್ತ ಕಣಗಳಲ್ಲಿ ಮತ್ತು ಮೂತ್ರಗಳಲ್ಲಿ 70-80 ದಿನಗಳವರೆಗೆ ಜೀವಂತವಾಗಿರುತ್ತವೆ ಹಾಗಾಗಿ ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭ ದುಶ್ಚಟಕ್ಕೆ ಬಲಿಯಾದವರನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ ಮತ್ತೆ ಪ್ರಾರಂಭದಲ್ಲೇ ಅವರನ್ನು ಆ ಜಾಲದಿಂದ ಹೊರತರಲು ಪೋಷಕರು ಹಾಗೂ ಶಾಲಾ ಸಿಬ್ಬಂದಿಗಳಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಹಲವಾರು ದೇಶಗಳಲ್ಲಿ ಚೀನಾ, ಸಿಂಗಾಪೂರ , ಅರಬ್ ರಾಷ್ಟ್ರಗಳಲ್ಲಿ ಡ್ರಗ್ ಸಂಪೂರ್ಣ ನಿಷೇಧಿಸಿದೆ, ಅದು ನಮ್ಮ ದೇಶದಲ್ಲಿ ಯಾಕೆ ಆಗುತ್ತಿಲ್ಲ ಎಂಬುದು ಯಕ್ಷಪ್ರಶ್ನೆ ಆಗಿದೆ ಎಂದಿರುವ ತಾರಾ ಶ್ರೀಲಂಕಾದಲ್ಲಿ ಡ್ರಗ್ ಮಾರಾಟ ಮಾಡುವವರನ್ನು ನೇಣುಗಂಬಕ್ಕೆ ಏರಿಸುವ ಕಾನೂನು ಇದೆ, ಇದೇ ಕಾನೂನನ್ನು ನಮ್ಮ ದೇಶದಲ್ಲೂ ತಂದರೆ ಡ್ರಗ್ ಮಾಫಿಯಾವನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದ್ದಾರೆ.

ರಾಜ್ಯ ಸರಕಾರ ಈಗಾಗಲೇ ಹಲವಾರು ಐತಿಹಾಸಿಕ ಯೋಜನೆಗಳನ್ನು ರಾಜ್ಯಕ್ಕೆ ನೀಡಿದ್ದು ಈ ನಿಟ್ಟಿನಲ್ಲಿ ಡ್ರಗ್ ನಿಯಂತ್ರಣಕ್ಕೂ ನಿರ್ದಾಕ್ಷೀಣ್ಯ ಕ್ರಮಗಳನ್ನು ಕೈಗೊಂಡು ಡ್ರಗ್ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿಯನ್ನು ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next