ನೆಲಮಂಗಲ: ಜನರಿಗೆ ಕಾನೂನಿನ ಭಯ ಕಡಿಮೆಯಾಗಿದ್ದು ಅಪರಾಧ,ಅನ್ಯಾಯ,ಲಂಚ,ಸುಲಿಗೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಡ್ರಗ್ಸ್‌ನಂತಹ ಜಾಲಗಳುಸಂಪೂರ್ಣವಾಗಿ ನಿಲ್ಲುತ್ತದೆಎಂದುನಿ ವೃತ್ತಪೊಲೀಸ್ ಕಮಿಷನರ್ ಶಂಕರ್ ಬಿದರಿ ಸಲಹೆ ನೀಡಿದರು.
ನಗರದ ಟಿಬಿ ನಿಲ್ದಾಣ ಸಮೀಪದ ವಾಜರಹಳ್ಳಿ ರಸ್ತೆ ಪಕ್ಕದಲ್ಲಿ ನಿತ್ಯಾಗಾರ್ಮೆಂಟ್ಸ್‌ನ 7ನೇ ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು,ದೇಶದಲ್ಲಿ ಮೊದಲಿನಿಂದಲೂ ಡ್ರಗ್ಸ್ ಇತ್ತು.ಈಗ ವ್ಯಾಪಕವಾಗಿ ಹರಡಿದೆ. ಪೊಲೀಸರಿಗೆ ಸಂಪೂರ್ಣ ಸ್ವತಂತ್ರ ನೀಡಿದರೆ ಮಾತ್ರ ಡ್ರಗ್ಸ್ ನಂತಹ ಜಾಲಮಟ್ಟ ಹಾಕಲು ಸಾದ್ಯ ಎಂದರು.
ಅಡೆತಡೆಗಳನ್ನು ದೂರಮಾಡಿ: ಆತ್ಮನಿರ್ಭರ ಭಾರತದ ಯೋಜನೆಗಳು 70ವರ್ಷ ಗಳಿಂದಲೂ ದೇಶದಲ್ಲಿ ಇದೆ. ಸರ್ಕಾರಗಳು ಘೋಷಣೆ ಮಾಡುವ ಯೋಜನೆಗಳು ಪ್ರಾಮಾಣಿಕರಿಗೆ ಅನುಕೂಲವಾಗುವದು ವಿರಳ.ಆದ್ದರಿಂದ ಸರ್ಕಾರ, ಪ್ರಾಮಾಣಿಕವಾಗಿ ದುಡಿಯುವ ಕೈಗಾರಿಕೆ ಹಾಗೂ ಉದ್ಯಮಿಗಳು,ವ್ಯಾಪಾರಿಗಳಿಗೆ ಎದುರಾಗುವ ಅಡೆತಡೆಗಳನ್ನುನಿ ವಾರಿಸಲುನ್ಯಾ ಯಯುತವಾಗಿ ಅನುಮತಿನೀ ಡುವುದಕ್ಕೆಆದ್ಯತೆ ನೀಡಬೇಕಾಗಿದೆ. ಸ್ಥಳೀಯವಾಗಿ ತಯಾರಾಗುವ ಉತ್ಪನ್ನಗಳನ್ನು ಜನರು ಹೆಚ್ಚು ಬಳಕೆ ಮಾಡಬೇಕು.ನಮ್ಮವರನ್ನು ನಾವು ಉಳಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಕುಮಾರ್ ಎಂಬ ವ್ಯಕ್ತಿ100ಕ್ಕೂಹೆಚ್ಚು ಜನರಿಗೆಉದ್ಯೋಗ ನೀಡಿರುವುದು ಶ್ಲಾಘನೀಯ.ಇದೇ ರೀತಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಲಿ ಎಂದರು. ಗಾರ್ಮೆಂಟ್ಸ್‌ಮೂಲಕ ಶಂಕರ್ ಬಿದರಿ ಅವರಿಂದ 5 ಸಾವಿರ ಮಾಸ್ಕ್ ರಿಸಲಾಯಿತು.
ನಿತ್ಯಾಗಾರ್ಮೆಂಟ್ಸ್ ಮಾಲಿಕ ಆರ್.ಕುಮಾರ್‌ಮಾತ ನಾಡಿದರು.ಸಂಚಾರಪೊಲೀಸ್ ಠಾಣೆ ಪಿಎಸ್‌ಐ ಅಂಜನ್ ಕುಮಾರ್,ಗಾರ್ಮೆಂಟ್ಸ್ ವ್ಯವಸ್ಥಾಪಕ ನಿರ್ದೇಶಕ ಸಚ್ಚಿದಾನಂದ, ಮುರುಳಿಮಾಸ್ಟರ್,ಸ್ವಾಮಿ ,ಅರುಣ್‌ರವಿ ಮತ್ತಿತರರಿದ್ದರು.