Advertisement

Mangaluru: ಡ್ರಗ್ಸ್‌ ಸೇವನೆ: ಮೂವರ ಬಂಧನ

07:53 PM Aug 10, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಮೂವರನ್ನು ನಗರದ ಉತ್ತರ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Advertisement

ಸಂಜೆ 6 ಗಂಟೆಗೆ ನಗರದ ಅನ್ಸಾರಿ ಕ್ರಾಸ್‌ ರೋಡ್‌ ಯತೀಮ್‌ ಖಾನ ಮ್ಯಾರೇಜ್‌ ಹಾಲ್‌ ಬಳಿ ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆಂಬ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಮ್ಮದ್‌ ಹಮೀರ್‌ (28), ಅಲ್‌ ಆರಾಪ್‌(30) ಮತ್ತು ಮಹಮ್ಮದ್‌ ಶರೀಫ್(25)ನನ್ನು ವಶಕ್ಕೆ ಪಡೆದಿದ್ದಾರೆ.

ಅವರನ್ನು ವಿಚಾರಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next