Advertisement

JMFC Court;ಡ್ರಗ್ಸ್‌ ಪ್ರಕರಣ: ಅಪರಾಧಿಗೆ ಕಠಿನ ಸಜೆ

07:52 PM Jul 10, 2023 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಪ್ರಕರಣದ ಅಪರಾಧಿ ಕುದ್ರೋಳಿಯ ಸಿಪಿಸಿ ಕಂಪೌಂಡ್‌ನ‌ ನಿವಾಸಿ ಇಬ್ರಾಹಿಂ ಕೆ. (39) ಎಂಬಾತನಿಗೆ ಮಂಗಳೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ತಾರಾ ಕೆ.ಸಿ ಅವರು ಆರು ತಿಂಗಳ ಕಠಿನ ಸಜೆ ಮತ್ತು 10,000 ರೂ. ದಂಡ ವಿಧಿಸಿದ್ದಾರೆ.

Advertisement

ಒಂದು ವೇಳೆ ದಂಡ ಪಾವತಿಸಲು ವಿಫ‌ಲವಾದರೆ ಒಂದು ತಿಂಗಳು ಹೆಚ್ಚುವರಿ ಸಾದಾ ಸಜೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

2018ರ ಫೆ.14ರಂದು ಇಬ್ರಾಹಿಂ ಸ್ಕೂಟರ್‌ನಲ್ಲಿ ಗಾಂಜಾವನ್ನಿಟ್ಟು ನಗರದ ಕುಂಟಿಕಾನ ಜಂಕ್ಷನ್‌ ಫ್ಲೈಓವರ್ ಕೆಳಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು.ಆತನ ಪ್ಯಾಂಟಿನ ಕಿಸೆಯಲ್ಲಿ 50 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಆತ ಕಾಸರಗೋಡಿನ ಉಪ್ಪಳದಿಂದ ಗಾಂಜಾ ಖರೀದಿಸಿ ಮಾರಾಟ ಮಾಡಲು ತಂದಿರುವುದು ದೃಢಪಟ್ಟಿತ್ತು.

ಅಂದಿನ ಉರ್ವ ಪೊಲೀಸ್‌ ಠಾಣಾ ನಿರೀಕ್ಷಕರಾಗಿದ್ದ ರವೀಶ್‌ ನಾಯ್ಕ ಅವರು ಪ್ರಕರಣ ದಾಖಲಿಸಿ ಪಿಎಸ್‌ಐ ವನಜಾಕ್ಷಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಸರಕಾರಿ ಅಭಿಯೋಜಕಿ ನೇತ್ರಾವತಿ ಅವರು ಸರಕಾರದ ಪರವಾಗಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next