Advertisement

“ಮಾದಕ ವ್ಯಸನಕ್ಕೆ ಹೆಚ್ಚಾಗಿ ನಗರ ಪ್ರದೇಶದವರು ಬಲಿ: ಪಿ.ವಿ. ಭಂಡಾರಿ

07:40 AM Jul 05, 2018 | |

ಉಡುಪಿ: ಉಡುಪಿ ಜಿಲ್ಲಾ ಎನ್‌ಎಸ್‌ಯುಐ ವತಿಯಿಂದ ಮಾದಕ ವಸ್ತುಗಳ ಬಳಕೆ ವಿರೋಧಿ ಕುರಿತ ಜಾಗೃತಿ ಕಾರ್ಯಾಗಾರ ನಗರದ ಸೈಂಟ್‌ ಸಿಸಿಲಿಸ್‌ ಪದವಿಪೂರ್ವ ಕಾಲೇಜಿನಲ್ಲಿ ಜು. 2ರಂದು ಜರಗಿತು.

Advertisement

ಮನೋರೋಗ ತಜ್ಞ ಡಾ| ಪಿ. ವಿ. ಭಂಡಾರಿ, ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗಿದೆ. ಅದರಲ್ಲಿ ಮುಖ್ಯವಾಗಿ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಯುವಕರು ಇಂತಹ ದುಶ್ಚಟಗಳಿಗೆ ಒಳಗಾಗುತ್ತಿರುವುದು ಹೆಚ್ಚಾಗಿದೆ. ಮಾದಕ ದೃವ್ಯಗಳ ಬಳಕೆ ಸಂಪೂರ್ಣ ನಿರ್ಮೂಲನೆ ಮಾಡಿ, ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸಬೇಕಾಗಿದೆ ಎಂದವರು ತಿಳಿಸಿದರು.

ಎನ್‌ಎಸ್‌ಯುಐನ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್‌, ಪ್ರಾಂಶುಪಾಲ ರಾದ  ಸಿಸ್ಟರ್‌ ಗ್ರೇಸಿ, ಎನ್‌ಎಸ್‌ಯುಐ ರಾಜ್ಯ ಸಮಿತಿಯ ಕಾರ್ಯದರ್ಶಿ ಫಾರೂಕ್‌, ಜಿಲ್ಲಾಧ್ಯಕ್ಷ  ಕ್ರಿಸ್ಟನ್‌ ಡಿ’ಆಲ್ಮೇಡಾ, ನಬೀಲ್‌ ಉದ್ಯಾವರ, ನೀರಜ್‌ ಪಾಟೀಲ್‌, ಹರ್ಷಿತ್‌ ಆಚಾರ್ಯ, ವಿಶಾಕ್‌, ನಿತೇಶ್‌, ದೇವದಾಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next