Advertisement

ಮಧುಮೇಹಿ ವಿದ್ಯಾರ್ಥಿಗಳಿಗೆ ಔಷಧ ಆತಂಕ

09:58 AM Mar 03, 2020 | sudhir |

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪಿಯುಸಿ, ಎಸೆಸೆಲ್ಸಿ ಪರೀಕ್ಷೆ ವೇಳೆ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ಪರೀಕ್ಷಾ ಕೊಠಡಿಗೆ ತರುವುದನ್ನು ನಿರ್ಬಂಧಿಸಿದ್ದು, ಮಧುಮೇಹಿ ವಿದ್ಯಾರ್ಥಿಗಳು ಚಿಂತೆಯಲ್ಲಿದ್ದಾರೆ.

Advertisement

ಈ ವಾರದಿಂದ ಪಿಯುಸಿ ಪರೀಕ್ಷೆ ಆರಂಭವಾಗುತ್ತದೆ, ಮಾಸಾಂತ್ಯಕ್ಕೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಬಾಲ್ಯ ಮಧುಮೇಹ -1 (ಜ್ಯುವೆನೈಲ್‌ ಟೈಪ್‌ 1 ಡಯಾಬಿಟೀಸ್‌) ಪೀಡಿತರಾಗಿರುವ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ಜತೆಗೆ ಆ ಮೂರು ತಾಸು ಅವಧಿಯಲ್ಲಿ ಗ್ಲೂಕೋಸ್‌ ಮಾನಿಟರ್‌, ಮಾತ್ರೆ, ಇನ್ಸುಲಿನ್‌ನಂತಹ ವೈದ್ಯಕೀಯ ಸಲಕರಣೆ ಬಿಟ್ಟಿರು ವುದು ಹೇಗೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

ಪ್ರೌಢ ಶಿಕ್ಷಣ ಮಂಡಳಿಯ ಆದೇಶದ ಪ್ರಕಾರ ತೀವ್ರ ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ದೇಹದ ಸಕ್ಕರೆ ಅಂಶದ ಮೇಲೆ ನಿರಂತರ ನಿಗಾ ಇರಿಸಲು ಅಗತ್ಯವಾದ ವಿದ್ಯುನ್ಮಾನ ಉಪಕರಣವಾದ ಗ್ಲೂಕೋಸ್‌ ಮಾನಿಟರ್‌, ಸಕ್ಕರೆ ನಿಯಂತ್ರಿಸುವ ಇನ್ಸುಲಿನ್‌ ಪಂಪ್‌ ಜತೆಗೆ ಮಾತ್ರೆ, ಆಹಾರ ಪದಾರ್ಥಕ್ಕೂ ಅನುಮತಿ ಇಲ್ಲ.

ಮಧುಮೇಹ -1ರಿಂದ ಬಳಲುತ್ತಿರುವ ಮಕ್ಕಳಿಗೆ ಯಾವ ಸಮಯದಲ್ಲಾದರೂ ದೇಹದಲ್ಲಿ ಸಕ್ಕರೆ ಅಂಶ ಅಧಿಕವಾಗಬಹುದು, ಅಂತೆಯೇ ಕಡಿಮೆಯಾಗಬಹುದು. ಈ ವೇಳೆ ಔಷಧ ಅತ್ಯಗತ್ಯ. ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾದರೆ ಆಹಾರ ಸೇವಿಸಿ, ಮಾತ್ರೆ ತೆಗೆದುಕೊಳ್ಳಬೇಕು. ಸಕ್ಕರೆ ಅಂಶ ಹೆಚ್ಚಾದರೆ ಮಾತ್ರೆ ಅಥವಾ ಇನ್ಸುಲಿನ್‌ ಚುಚ್ಚುಮದ್ದು ತೆಗೆದುಕೊಳ್ಳಬೇಕು.

10 ಸಾವಿರಕ್ಕೂ ಹೆಚ್ಚು
ಟೈಪ್‌ ಒನ್‌ ಡಯಾಬಿಟಿಸ್‌ ಫೌಂಡೇಶನ್‌ ಆಫ್ ಇಂಡಿಯಾ ಮಾಹಿತಿ ಪ್ರಕಾರ ರಾಜ್ಯದಲ್ಲಿ 30 ಸಾವಿರ ಮಂದಿ ಮಧುಮೇಹ – 1ರಿಂದ ಬಳಲು ತ್ತಿದ್ದು, ಈ ಪೈಕಿ 10 ಸಾವಿರಕ್ಕೂ ಹೆಚ್ಚು ಮಕ್ಕ ಳಿ ದ್ದಾರೆ. ಬೆಂಗಳೂರಿನಲ್ಲಿಯೇ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳಿದ್ದಾರೆ. 2017ರಲ್ಲಿ ಯುನೈಟೆಡ್‌ ಸ್ಟೇಟ್ಸ್‌ ನ್ಯಾಶನಲ್‌ ಲೈಬ್ರೆರಿ ಆಫ್ ಮೆಡಿಸಿನ್‌ ಭಾಗವಾಗಿರುವ ನ್ಯಾಶನಲ್‌ ಸೆಂಟರ್‌ ಆಫ್ ಬಯೋಟೆಕ್ನಾಲಜಿ ಇನಾ#ರ್ಮೇಶನ್‌ ಪ್ರಕಟಿ ಸಿದ ವರದಿಯ ಪ್ರಕಾರ, ಕರ್ನಾಟಕವು ಮಧುಮೇಹ-1ರಲ್ಲಿ ಮುಂಚೂಣಿಯಲ್ಲಿದ್ದು, ಒಂದು ಲಕ್ಷ ಮಕ್ಕಳಲ್ಲಿ 17 ಮಂದಿ ಇದರಿಂದ ಬಾಧಿತರಾಗಿ¨ªಾರೆ.

Advertisement

ಸಿಬಿಎಸ್‌ಇಯಲ್ಲಿದೆ ಅನುಮತಿ
ಎರಡು ವರ್ಷಗಳ ಹಿಂದೆಯೇ ಕೇಂದ್ರ ಸರಕಾರವು ತೀವ್ರ ಮಧುಮೇಹದಿಂದ ಬಳಲುತ್ತಿರುವ ಮಕ್ಕಳನ್ನು ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಅಂಗವಿಕಲ ವರ್ಗಕ್ಕೆ ಸೇರ್ಪಡೆ ಮಾಡಿ ಪರೀಕ್ಷಾ ಕೊಠಡಿಗೆ ಆಹಾರ ಪದಾರ್ಥ (ಮಾತ್ರೆ, ಸಿಹಿ ತಿಂಡಿ) ಒಯ್ಯಲು ಅನುಮತಿ ನೀಡಿದೆ. ರಾಜ್ಯ ಸರಕಾರವೂ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಟೈಪ್‌ ಒನ್‌ ಡಯಾಬಿಟಿಸ್‌ ಫೌಂಡೇಶನ್‌ ಆಫ್ ಇಂಡಿಯಾ ಮುಖ್ಯಸ್ಥ ಕೆ.ಎಸ್‌. ನವೀನ್‌ ಒತ್ತಾಯಿಸಿದ್ದಾರೆ.

ಇಂತಹ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಪ್ರಕರಣಗಳನ್ನು ಮಾನವೀಯತೆ ಆಧಾರದಲ್ಲಿ ಪರಿಗಣಿಸಬೇಕಾಗುತ್ತದೆ. ಮಧುಮೇಹ -1ರಿಂದ ಬಳಲುತ್ತಿರುವ ಮಕ್ಕಳನ್ನು ವಿಶೇಷವಾಗಿ ಪರಿಗಣಿಸಿ, ಆರೋಗ್ಯ ಇಲಾಖೆ ಸಹಾಯ ಪಡೆದು ಪರೀಕ್ಷೆ ವೇಳೆ ಅಗತ್ಯ ನೆರವು ನೀಡಲು ಕ್ರಮಕೈಗೊಳ್ಳಲಾಗುವುದು.
-ವಿ. ಸುಮಂಗಲಾ, ಎಸೆಸೆಲ್ಸಿ ಮಂಡಳಿ ನಿರ್ದೇಶಕಿ

– ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next