Advertisement

ಮಹಿಳೆಯರಿಂದ ಮಾತ್ರ ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯ

02:53 PM Mar 24, 2017 | Team Udayavani |

ಹುಬ್ಬಳ್ಳಿ: ನಿಮ್ಮ ಮನೆ ಹಾಗೂ ಸುತ್ತಲಿನಲ್ಲಿ ಮದ್ಯವ್ಯಸನಿಗಳಿದ್ದಲ್ಲಿ ಅವರನ್ನು ಆ ಚಟದಿಂದ ವಿಮುಕ್ತರನ್ನಾಗಿ ಮಾಡಲು ಹೆಣ್ಣು ಮಕ್ಕಳಿಂದ ಮಾತ್ರ ಸಾಧ್ಯ. ಅಂತಹ ಅದ್ಭುತ ಶಕ್ತಿ ಅವರಲ್ಲಿದೆ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್‌.ಸಿ. ರುದ್ರಪ್ಪ ಕಿವಿಮಾತು ಹೇಳಿದರು. ಇಲ್ಲಿನ ಘಂಟಿಕೇರಿಯ ನೆಹರು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ಬೀದಿ ನಾಟಕ, ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಚಟಕ್ಕೊಳಗಾದವರಿಗೆ ಹೆಣ್ಣು ಮಕ್ಕಳು ಬುದ್ಧಿ ಹೇಳಿ ಬಿಡಿಸಲು ಸಮರ್ಥರಾಗಿದ್ದು, ಅವರ ಮಾತಿಗೆ ಚಟಕ್ಕೊಳಗಾದ ತಂದೆ ಹಾಗೂ ಸಹೋದರರು ಸಹ ಕಿವಿಗೊಟ್ಟು ಚಟದಿಂದ ಮುಕ್ತರಾಗಲು ಪ್ರಯತ್ನಿಸುತ್ತಾರೆ. ಆ ನಿಟ್ಟಿನಲ್ಲಿ ಕಾರ್ಯ ಮಾಡಲು ಯುವತಿಯರು ಮುಂದಾಗುವುದು ತುಂಬಾ ಅವಶ್ಯವಿದೆ.

ಪ್ರತಿಯೊಂದು ಮನೆಯಲ್ಲಿಯೂ ಹೆಣ್ಣು ಮಕ್ಕಳ ಮೇಲೆ ಪ್ರೀತಿ ಇರುತ್ತದೆ. ತಂದೆಯಾಗಲಿ, ಸಹೋದರರಾಗಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮಾತು ಕೇಳುವುದು ಸಾಮಾನ್ಯ ಎಂದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಶμಅಹ್ಮದ ಮುದ್ದೇಬಿಹಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂದಿನ ಜೀವನ ರೂಪಿಸಿಕೊಳ್ಳಲು ಕಾಲೇಜು ಮಟ್ಟ ಬಹಳ ಮಹತ್ವ ಪೂರ್ಣವಾಗಿದೆ.

ಈ ಸಮಯದಲ್ಲಿ ಮನಸ್ಸು ಬದಲಾದರೆ, ಅನ್ಯಮಾರ್ಗಕ್ಕೆ ಹೋದರೆ ಜೀವನದ ಹಾದಿಯೇ ಬದಲಾಗುವುದು. ಇದನ್ನು ಅರಿತುಕೊಂಡು ಯಾವುದೇ ರೀತಿಯ ದುಶ್ಚಟಕ್ಕೊಳಗಾಗದೇ ಜೀವನದ ಉತ್ತಮ ಗುರಿಗಳನ್ನು ಕಂಡುಕೊಳ್ಳುವ ಒಳ್ಳೆಯ ಮಾರ್ಗ ಕಂಡುಕೊಳ್ಳಬೇಕು ಎಂದರು. 

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮುಧೋಳ ಮಾತನಾಡಿ, ಮದ್ಯವ್ಯಸನ ಅನಾದಿಕಾಲದಿಂದಲೂ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದೊಂದು ಫ್ಯಾಶನ್‌ ಆಗಿ ಬಿಟ್ಟಿದೆ. ಇದನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯವಾಗದಿದ್ದರೂ ತಡೆಗಟ್ಟಬಹುದು.

Advertisement

ಈ ನಿಟ್ಟಿನಲ್ಲಿ ಸರಕಾರಗಳು ಗಂಭೀರ ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ಕಾಲೇಜುಗಳಲ್ಲಿ ಮಾತ್ರ ಈ ಕುರಿತು ಜಾಗೃತಿ ಮೂಡಿಸಿದರೆ ಸಾಲದು. ಸ್ಲಂ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೆ ದೇಶದಲ್ಲಿ ಮದ್ಯ ರಹಿತವೆಂದು ಕಾನೂನು ಜಾರಿಗೆ ತಂದಾಗ ಮದ್ಯವ್ಯಸನಿಗಳನ್ನು ನಿಯಂತ್ರಿಸಬಹುದಾಗಿದೆ ಎಂದರು. ಕಿಮ್ಸ್‌ನ ಡಾ| ಶೇಖ್‌ಸಾಬ್‌ ಎಫ್‌. ಕಮ್ಮಾರ ವಿಶೇಷ ಉಪನ್ಯಾಸ ನೀಡಿದರು.

ನೆಹರು ಕಾಲೇಜು ಪ್ರಾಂಶುಪಾಲ ಡಾ| ಎಂ.ಎಫ್‌. ಅನ್ಸಾರಿ, ಪಪೂ ಕಾಲೇಜ್‌ ಪ್ರಾಂಶುಪಾಲ .ಎ. ಶಿವಳ್ಳಿ, ಬಾಬಾಜಾನ ಮುಧೋಳ, μರಾಜಿ ಖಂಡೇಕಾರ ಇದ್ದರು. ಸೈಯ್ಯದ ಅ ಹ್ಮದ ಸ್ವಾಗತಿಸಿದರು. ಡಾ| ಆಶಾ ನಿರೂಪಿಸಿದರು. ಇದಕ್ಕೂ ಮುನ್ನ ಮದ್ಯಪಾನದಿಂದಾಗುವ ದುಷ್ಪರಿಣಾಮ ಕುರಿತು ಮಾರುತಿ ನಾಟ್ಯ ಸಂಘದವರು ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next