Advertisement
ಎರಡು ತಿಂಗಳ ಶ್ವಾನಕ್ಕೆ ಬೆಂಗಳೂರಿನಲ್ಲಿ ತರಬೇತಿಶ್ವಾನದಳಕ್ಕೆ ಸೇರ್ಪಡೆಯಾಗಿರುವ ಡಾಬರ್‌ಮನ್ ತಳಿಯ ಸ್ನಿಫರ್ ಹೆಸರಿನ 2 ತಿಂಗಳ ಶ್ವಾನವು ಶೀಘ್ರದಲ್ಲಿಯೇ ಬೆಂಗಳೂರಿಗೆ ತೆರಳಲಿವೆ. ಅಲ್ಲಿ ಅಪರಾಧ ಪತ್ತೆಯೊಂದಿಗೆ ಮಾದಕ ವ್ಯಸನಗಳನ್ನು ಪತ್ತೆ ಹಚ್ಚುವ ಬಗ್ಗೆ ಇದಕ್ಕೆ ತರಬೇತಿ ನೀಡಲಾಗು ತ್ತದೆ. ಅಲ್ಲಿ ತರಬೇತಿ ಪಡೆದ ಬಳಿಕ ಉಡುಪಿಗೆ ಕರ್ತವ್ಯಕ್ಕೆ ಹಾಜರಾಗಲಿದೆ. ಅಗತ್ಯಬಿದ್ದರೆ ಇತರ ಜಿಲ್ಲೆಗಳಿಗೂ ಈ ಶ್ವಾನಗಳು ಕರ್ತವ್ಯಕ್ಕೆ ತೆರಳಲಿವೆ.
ಉಡುಪಿ ಜಿಲ್ಲೆಯಲ್ಲಿ ಶ್ವಾನಗೃಹದಲ್ಲಿ ಒಟ್ಟು 4 ಶ್ವಾನಗಳಿವೆ. ಒಂದು ಶ್ವಾನದ ನಿರ್ವಹಣೆಗೆ ದಿನವೊಂದಕ್ಕೆ ತಗಲುವ ವೆಚ್ಚ 300 ರೂ.ಗಳು. ಊಟ, ವೈದ್ಯ ಕೀಯ ಆರೈಕೆ ಸಹಿತ ಎಲ್ಲವೂ ಇದರಲ್ಲಿ ಒಳಗೊಂಡಿರುತ್ತವೆ. ಒಂದು ಶ್ವಾನವನ್ನು ಇಬ್ಬರು ಹ್ಯಾಂಡ್ಲರ್‌ಗಳು ಆರೈಕೆ ಮಾಡುತ್ತಿದ್ದಾರೆ. 2.5 ಕೋ.ರೂ.ವೆಚ್ಚದ ಯೋಜನೆ
ಶ್ವಾನದಳದ ಬಲವರ್ಧನೆಗಾಗಿ ರಾಜ್ಯ ಪೊಲೀಸ್ ಇಲಾಖೆಯು ಸುಮಾರು 2.5 ಕೋ.ರೂ.ವೆಚ್ಚದಲ್ಲಿ ಶ್ವಾನದಳಕ್ಕೆ 50 ಶ್ವಾನಗಳನ್ನು ಸೇರ್ಪಡಿಸುವ ಉದ್ದೇಶ ಹೊಂದಿದೆ. ಸ್ಫೋಟಕ, ಮಾದಕ ವಸ್ತುಗಳು ಹಾಗೂ ಅಪರಾಧಿಗಳ ಪತ್ತೆದಾರಿಕೆಯಲ್ಲಿ ಶ್ವಾನದಳವು ಮಹತ್ತರವಾದ ಪಾತ್ರ ವಹಿಸುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಜರ್ಮನ್ ಶೆಫರ್ಡ್, ಲಾಬ್ರೆಡಾರ್, ಬೆಲ್ಜಿಯಂ ಮಾಲಿನೋಯಿಸ್, ಗೋಲ್ಡನ್ ರಿಟ್ರೇವರ್ ಹಾಗೂ ಡಾಬರ್‌ಮನ್ ತಳಿಗಳ 55 ಶ್ವಾನಗಳಿವೆ. ಮುಂದಿನ ದಿನಗಳಲ್ಲಿ ಮಹಿಳಾ ಪೇದೆಗಳನ್ನು ಈ ದಳಕ್ಕೆ ನೇಮಿಸಲು ಇಲಾಖೆ ಚಿಂತನೆ ನಡೆಸಿದೆ.
Related Articles
ಅಪರಾಧ ಪತ್ತೆಯೊಂದಿಗೆ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಶ್ವಾನಗಳನ್ನು ಬಳಸಿಕೊಳ್ಳುವ ಚಿಂತನೆಯಿದೆ. ಉಡುಪಿ ಜಿಲ್ಲೆಯಿಂದ ಸ್ನಿಫರ್ ಹೆಸರಿನ ಶ್ವಾನವನ್ನು ತರಬೇತಿಗೊಳಿಸಿ ಸಿದ್ಧಗೊಳಿಸಲಾಗುವುದು.
-ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ
Advertisement