Advertisement

Drought; ಕೇಂದ್ರ ನಯಾ ಪೈಸೆ ಬಿಡುಗಡೆ ಮಾಡಿಲ್ಲ, ಆದರೂ.. : ಸಿಎಂ ಸಿದ್ದರಾಮಯ್ಯ

07:23 PM Dec 02, 2023 | Team Udayavani |

ಬೀದರ್ :ಬೆಳೆ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಯಾ ಪೈಸೆ ಬಿಡುಗಡೆ ಆಗದಿದ್ದರೂ ನಮ್ಮ ರೈತರಿಗೆ ಮೊದಲ ಕಂತಿನಲ್ಲಿ 2 ಸಾವಿರ ರೂ. ಪರಿಹಾರ ಪಾವತಿಸಲು ನಿರ್ಣಯಿಸಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

Advertisement

ಭಾಲ್ಕಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬರ ಬಂದಿದ್ದು, ಅಕ್ಟೋಬರನಲ್ಲಿ ಕೇಂದ್ರದ ತಂಡ ಭೇಟಿ ನೀಡಿ ಅಧ್ಯಯನ ಮಾಡಿದೆ. ಆದರೆ, ಈವರೆಗೆ ಪರಿಹಾರ ನೀಡಿಲ್ಲ.‌ ನಮ್ಮ ತೆರಿಗೆ ನಮಗೆ ಕೊಡಲು ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು‌ ಕಿಡಿಕಾರಿದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐದು ರಾಜ್ಯಗಳಲ್ಲಿ ಜಯಭೇರಿ ಬಾರಿಸಲಿದ್ದು, ರಾಜಸ್ಥಾನದಲ್ಲಿ 50: 50 ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದ ಸಿಎಂ, ತೆಲಂಗಾಣದಲ್ಲಿ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ಸಿನ ಯಾವ ಅಭ್ಯರ್ಥಿಯೂ ಬಲಿಯಾಗಲ್ಲ. ಬಿಆರ್ ಎಸ್ ನವರು ಪ್ರಯತ್ನ ಮಾಡಿದರೂ ಆಗಲ್ಲ. ತೆಲಂಗಾಣದಲ್ಲಿ ಬಿಆರ್ ಎಸ್ ಮತ್ತು ಕಾಂಗ್ರೆಸ್ ನಡುವೆ ಫೈಟ್ ಇದೆ. ಅಲ್ಲಿ ಪ್ರಧಾನಿ ಮೋದಿ ಬಹಳ ಸುತ್ತಿದರೂ ಬಿಜೆಪಿಗೆ ಐದಾರೂ ಸೀಟುಗಳಷ್ಟೇ ಬರಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next