Advertisement

Uttar Pradesh: ಮಹಾಕುಂಭಮೇಳ ರಕ್ಷಣೆಗೆ ನೀರಿನಾಳದಲ್ಲೂ ಡ್ರೋನ್‌!

12:39 AM Dec 30, 2024 | Team Udayavani |

ಮಹಾಕುಂಭ ನಗರ: ಇದೇ ಮೊದಲ ಬಾರಿಗೆ ಮಹಾಕುಂಭಮೇಳದ ಸುರಕ್ಷೆಯನ್ನು ಪೂರ್ಣವಾಗಿ ಡ್ರೋನ್‌ಗೆ ವಹಿ­ಸಲಾಗಿದೆ. ಇದಕ್ಕಾಗಿ ನೀರಿನಾಳದಲ್ಲಿ ಸಂಚ­­ರಿ­ಸುವ ಹಾಗೂ ಹಾರುವ ಡ್ರೋನ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

Advertisement

ನೀರಿನಾಳದಲ್ಲಿ ಈ ಡ್ರೋನ್‌ಗಳು 100 ಮೀ. ಮುಳುಗುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಮೊದಲ ಬಾರಿಗೆ ಟೆಥರ್ಡ್‌ ಡ್ರೋನ್‌ಗಳನ್ನು ಬಳಕೆ ಮಾಡ­ಲಾಗುತ್ತಿದೆ. ಈ ಡ್ರೋನ್‌ಗಳು ವಯರ್‌ ಮೂಲಕ ಸಂಪರ್ಕ ಹೊಂದಿರುವುದ­ರಿಂದ ನಿರಂತರವಾಗಿ ಕಾರ್ಯನಿರ್ವಹಿಸ­ಲಿವೆ. ಇವುಗಳು ಅನುಮಾನಾಸ್ಪದ ವಸ್ತು­ಗಳ ನಿಖರ ಮಾಹಿತಿ ನೀಡಬಲ್ಲವು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಲ್ಲದೇ ನದಿಯುದ್ದಕ್ಕೂ 700 ರಕ್ಷಣ ಬೋಟ್‌ಗಳನ್ನು ನಿಯೋಜನೆ ಮಾಡಲಾಗಿದೆ.

ಮಹಾಕುಂಭಮೇಳಕ್ಕೆ ಸುಮಾರು 45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಕುಂಭಮೇಳ ನಡೆವ ಸಂಗಮ ಪ್ರದೇಶದಲ್ಲಿ ಭಾರೀ ಭದ್ರತೆ ವಹಿ­ಸಲಾಗಿದೆ. ಡ್ರೋನ್‌ಗಳ ಜತೆಗೆ 2700 ಕೆಮರಾಗಳನ್ನೂ ಅಳವಡಿಸಲಾಗಿದೆ.

ಬಿಗಿ ಭದ್ರತೆ: ಭದ್ರತೆ ನೋಡಿಕೊ­ಳ್ಳಲು 56 ಸೈಬರ್‌ ತಜ್ಞರನ್ನು ನಿಯೋಜಿಸಿದ್ದು, ಇವರು ಆನ್ಲೈನ್ ನಲ್ಲಿ ಬರಬಹುದಾದ ಆತಂಕಗಳನ್ನು ಪತ್ತೆ ಹಚ್ಚಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next