Advertisement

ಹಳ್ಳಿಗಳಲ್ಲಿ ಸಾಮಾಜಿಕ ಅಂತರ ಪರೀಕ್ಷೆಗೆ ಡ್ರೋಣ್‌ ಬಳಕೆ

12:56 PM Apr 27, 2020 | Suhan S |

ಧಾರವಾಡ: ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಅಂತರ ಕಾಪಾಡುವ ಹಿತದೃಷ್ಟಿಯಿಂದ ಪೊಲೀಸರು ಡ್ರೋಣ್‌ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದಾರೆ.

Advertisement

ಮೊನ್ನೆಯಷ್ಟೇ ಎಸ್‌ಪಿ ವರ್ತಿಕ ಕಟಿಯಾರ್‌ ಡ್ರೋಣ್‌ ಬಳಕೆಗೆ ಚಾಲನೆ ನೀಡಿದ್ದು, ಸದ್ಯ ಕೇವಲ 2 ಡ್ರೋಣ್‌ (ಮ್ಯಾವಿಕ್‌ ಪ್ರೋ) ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಈ ಎರಡು ಡ್ರೋಣ್‌ಗಳನ್ನು 2 ದಿನಕ್ಕೊಮ್ಮೆ ಎಸ್‌ಪಿ ವ್ಯಾಪ್ತಿಯ ಎಲ್ಲ ಠಾಣೆಗೆ ಹಂತ ಹಂತವಾಗಿ ಹಸ್ತಾಂತರ ಆಗಲಿದ್ದು, ಪ್ರತಿಯೊಂದು ಠಾಣೆಯಲ್ಲಿ ಎರಡು ದಿನ ಈ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಡ್ರೋಣ್‌ ಕ್ಯಾಮೆರಾಗಳು 500 ಮೀಟರ್‌ ಎತ್ತರದಲ್ಲಿ ಹಾರಲಿದ್ದು, 5 ಕಿ.ಮೀ. ದೂರದವರೆಗೂ ಕ್ರಮಿಸಬಲ್ಲವಾಗಿವೆ. ಹಳ್ಳಿಗಳಲ್ಲಿ ಗುಂಪು ಗುಂಪು ಜನ ನಿಲ್ಲುತ್ತಾರೋ? ಹಾಗೂ ಎಲ್ಲಿ ಪಡಿತರ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಪಾಡುತ್ತಿಲ್ಲವೋ? ಅಂತವುಗಳನ್ನು ನಿಯಂತ್ರಣ ಮಾಡಲು ಈ ಡ್ರೋಣ್‌ ಕ್ಯಾಮೆರಾಗಳನ್ನು ಬಳಕೆ ಮಾಡಲಾಗುತ್ತಿದೆ.

ಸದ್ಯ ನರೇಂದ್ರ ಗ್ರಾಮದಲ್ಲಿ ಇದಕ್ಕೆ ಒಳ್ಳೆಯ ಸ್ಪಂದನೆಯೂ ಸಿಕ್ಕಿದೆ. ಡ್ರೋಣ್‌ ಕ್ಯಾಮೆರಾ ಬಳಕೆ ಮಾಡಿದ್ದರಿಂದ ಉತ್ತಮ ಫಲಿತಾಂಶ ಸಿಕ್ಕಿದೆ. ಡ್ರೋಣ್‌ ಬಳಕೆ ಮಾಡಿದ ಜನ ಅದಕ್ಕೆ ಹೆದರಿ ಮನೆಯಿಂದ ಹೊರಗಡೆ ಹೋಗದಂತೆ ತಡೆಯಲು ಸಹಕಾರಿ ಆಗಿದೆ. ನರೇಂದ್ರ ಗ್ರಾಮದಲ್ಲಿ ಇದರಿಂದ ಒಳ್ಳೆಯ ಫಲಿತಾಂಶ ಸಿಕ್ಕಿದೆ ಎಂದು ಹೇಳುತ್ತಾರೆ ನರೇಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ತಿರ್ಲಾಪೂರ

ಜಿಲ್ಲೆಯಲ್ಲಿ ಇದೀಗ 2 ಡ್ರೋಣ್‌ ಕ್ಯಾಮೆರಾ ಬಳಕೆ ಮಾಡಿಕೊಂಡಿದ್ದು, ಜಿಲ್ಲೆಯ ಪ್ರತಿ ಠಾಣೆಗೆ ಎರಡು ದಿನಗಳ ಬಳಕೆಗೆ ಅವಧಿ ನಿಗದಿ ಮಾಡಲಾಗಿದೆ. ಅದರಂತೆ ಡ್ರೋಣ್‌ ಬಳಕೆ ಎಲ್ಲ ಠಾಣೆಗೂ ವಿಸ್ತರಣೆ ಆಗಲಿದ್ದು, ಇದರಿಂದ ಸದ್ಯಕ್ಕೆ ಒಳ್ಳೆಯ ಸ್ಪಂದನೆ ಲಭಿಸಿದೆ. – ವರ್ತಿಕ ಕಟಿಯಾರ್‌, ಎಸ್‌ಪಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next