ಬ್ಯಾಂಕಾಕ್: ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಏಳು ವರ್ಷಗಳ ಕಾಲ ಸ್ಯಾಟಲೈಟ್‌ಗಳನ್ನು ಬಳಸಿ ಆಸ್ತಿ ಸಮೀಕ್ಷೆ-ಅಧ್ಯಯನ ಮುಕ್ತಾಯ ವಾಗಿತ್ತು. ಇದೀಗ ಡ್ರೋಣ್‌ಗಳನ್ನು ಬಳಕೆ ಮಾಡಿಕೊಂಡು ಕೊಳಚೆ ಪ್ರದೇಶಗಳ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ. ಇಂಥ ಪ್ರಯತ್ನಕ್ಕೆ ಒಡಿಶಾ ಸರಕಾರ ಮುಂದಾಗಿದೆ. ಅದರ ಮೂಲಕ ಅಲ್ಲಿರುವ 2 ಲಕ್ಷಕ್ಕೂ ಅಧಿಕ ಮಂದಿಗೆ ವರ್ಷಾಂತ್ಯದ ಒಳಗಾಗಿ ಹಕ್ಕುಪತ್ರ ನೀಡಲು ನಿರ್ಧರಿಸಿದೆ. ಭೌತಿಕವಾಗಿ ಆಸ್ತಿ ಮತ್ತು ಸ್ಥಳ ಸಮೀಕ್ಷೆಯನ್ನು ನಡೆಸಲು ವರ್ಷಗಳೇ ಬೇಕಾಗುವುದಕ್ಕೆ ಕೇವಲ ಕೆಲವೇ ತಿಂಗಳುಗಳಲ್ಲಿ ಸಮೀಕ್ಷೆ ನಡೆಸಿ ಅದನ್ನು ಮುಕ್ತಾಯ ಗೊಳಿಸಲಾಗುತ್ತದೆ ಎಂದು ಒಡಿಶಾ ವಸತಿ ಆಯುಕ್ತ ಜಿ.ಮತಿ ವತನನ್ ಹೇಳಿದ್ದಾರೆ.
ಇದೇ ಮಾದರಿಯ ಕ್ರಮವನ್ನು ಮಹಾರಾಷ್ಟ್ರ ಸರಕಾರ ಕೂಡ ಕೈಗೊಳ್ಳಲಿದೆ. ಶೇ.60ರಷ್ಟು ಮಂದಿ ಮುಂಬಯಿನಲ್ಲಿ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯೂ ಕೂಡ ಕೊಳಚೆ ಪ್ರದೇಶಗಳಲ್ಲಿನ ವಸತಿ ಪ್ರದೇಶವನ್ನು ಸಮರ್ಪಕವಾಗಿ ಗುರುತಿಸಲು ಡ್ರೋಣ್‌ಗಳನ್ನು ಬಳಕೆ ಮಾಡಲಿದೆ.
ಬೆಂಗಳೂರಿನಲ್ಲಿ ಸ್ಯಾಟಲೈಟ್ ಮೂಲಕ ಆಸ್ತಿ ಸಮೀಕ್ಷೆಯ ದಾಖಲೆಗಳನ್ನು ಅಧ್ಯಯನ ಮಾಡಿದ ನಾರ್ತ್ ಕ್ಯಾರೊಲಿನಾ ವಿವಿಯ ಪ್ರಾಧ್ಯಾಪಕ ನಿಖೀಲ್ ಖಾಜಾ ಮಾತನಾಡಿ, ಯಾವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆಲೆಸಿದ್ದಾರೆ ಮತ್ತು ಸ್ಥಳೀಯ ಆಡಳಿತಕ್ಕೆ ಅವರಿಗೆ ಸೂಕ್ತ ನೆರವು ನೀಡುವ ನಿಟ್ಟಿನಲ್ಲಿ ಈ ಮಾಹಿತಿ ನೆರವಾಗಲಿದೆ ಎಂದಿದ್ದಾರೆ.
ನಗರ ಪ್ರದೇಶಗಳಲ್ಲಿನ ಆಸ್ತಿ ಬಗ್ಗೆ ಸೂಕ್ತ ಸಮೀಕ್ಷೆ ನಡೆಸದೇ ಇದ್ದರೆ, ಜನರಿಗೆ ತಕ್ಕಂತೆ ನೀತಿ ರೂಪಿಸುವುದು ಕಷ್ಟವೆಂದುಅಧ್ಯಯನದಲ್ಲಿ ಭಾಗಿಯಾಗಿದ್ದ ಅನಿರುದ್ಧ್ ಕೃಷ್ಣ ಹೇಳಿದ್ದಾರೆ.