Advertisement

ಅಮೆರಿಕದ ಸಹಭಾಗಿತ್ವದಲ್ಲಿ ಡ್ರೋನ್‌ ಅಭಿವೃದ್ಧಿ

12:30 AM Mar 17, 2019 | |

ನವದೆಹಲಿ: ಡ್ರೋನ್‌ಗಳು ಹಾಗೂ ಸಣ್ಣ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಯೋಜನೆಯನ್ನು ಅಮೆರಿಕ ಹಾಗೂ ಭಾರತ ಜಂಟಿಯಾಗಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಅಮೆರಿಕದ ರಕ್ಷಣಾ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. ಇತ್ತೀಚೆಗಷ್ಟೇ, ರಕ್ಷಣೆ ತಂತ್ರಜ್ಞಾನ ಮತ್ತು ವಹಿವಾಟಿಗೆ ಸಂಬಂಧಿಸಿ ಉಭಯ ದೇಶಗಳ ರಕ್ಷಣಾ ವಿಭಾಗದ ಅಧಿಕಾರಿಗಳ ಸಭೆ ನಡೆದಿದೆ. ಇದರಲ್ಲಿ ಯುದ್ಧ ವಿಮಾನದಿಂದಲೇ ಹಾರಿಬಿಡಬಹುದಾದ ಡ್ರೋನ್‌ಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಯೋಜನೆಗೆ ಅಮೆರಿಕದ ಏರ್‌ಫೋರ್ಸ್‌ ರಿಸರ್ಚ್‌ ಲ್ಯಾಬೊರೇಟರಿ ಮತ್ತು ಭಾರತದ ಡಿಆರ್‌ಡಿಒ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next