Advertisement
ವಿಧಾನಸೌಧದ ಮುಂಭಾಗ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛತಾ ವಾಹನಗಳಿಗೆ ಸಿ ಎಂ ಚಾಲನೆ ನೀಡಿದರು. ನಂತರ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, “ಅತಿ ದಟ್ಟಣೆಯ ಕಾರಿಡಾರ್‌ಗಳು, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ವಿಭಜಕ ಹಾಗೂ ಪಾದಚಾರಿ ಮಾರ್ಗದ ಬಳಿಯ ಮಣ್ಣು, ದೂಳಿನ ಕಣಧಿಗಳನ್ನು ಈ ಯಂತ್ರಗಳು ಸ್ವಚ್ಛಗೊಳಿಸಲಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ಉಂಟಾಧಿಗುವ ಕಿರಿಕಿರಿ ತಪ್ಪಿಸಬಹುದು. ಜನರ ಆರೋಗ್ಯ ಸಂರಕ್ಷಿಸುವ ಜತೆಗೆ ರಸ್ತೆಗಳ ಸ್ವಚ್ಛತೆ ಕಾಪಾಡಲು ಯಂತ್ರಗಳನ್ನು ಬಳಸಲಾಗುತ್ತಿದೆ,’ಎಂದರು.
Related Articles
Advertisement
ನಿರ್ವಹಣೆ ಮೊತ್ತ ಬಿಡುಗಡೆ ಹೇಗೆ?: ಬೃಹತ್ ಯಂತ್ರಗಳೂ ನಿತ್ಯ ಕನಿಷ್ಠ 50 ಕಿ.ಮೀ. ಉದ್ದದ ಮಾರ್ಗ ಸ್ವಚ್ಛಗೊಳಿಸಬೇಕು. ಯಂತ್ರಗಳು ಸ್ವಚ್ಛಗೊಳಿಸಿದ ಕಾರ್ಯದ ವಿಡಿಯೋ ಚಿತ್ರೀಕರಣ ನಡೆಸಿ ಪಾಲಿಕೆಗೆ ಸಲ್ಲಿಸಬೇಕು. ಜತೆಗೆ ಸಂಬಂಧಪಟ್ಟ ಎಂಜಿನಿಯರ್ ಖಾತರಿಪಡಿಸಿ ವರದಿ ಸಲ್ಲಿಸಿದರಷ್ಟೇ ನಿರ್ವಹಣೆ ಮೊತ್ತ ಬಿಡುಗಡೆಯಾಗಲಿದೆ. ಹಾಗೆಯೇ ಪ್ರತಿ ಯಂತ್ರಕ್ಕೂ ಜಿಪಿಎಸ್ ಸಾಧನ ಅಳವಡಿಸಬೇಕು. ಜಿಪಿಎಸ್ ನಿಯಂತ್ರಣ ವ್ಯವಸ್ಥೆಯನ್ನು ಎಲ್ಲ ಎಂಟು ವಲಯಗಳಲ್ಲಿ ಕಲ್ಪಿಸಿ, ನಿಯಂತ್ರಣ ಕೊಠಡಿಯನ್ನು ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಬೇಕು.
ಮಂಜುಳಾ ಮೇಲಿನ ಹಲ್ಲೆಗೆ ಪದ್ಮಾವತಿಗೆ ತರಾಟೆರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಇತ್ತೀಚೆಗೆ ಮಳೆ ನೀರು ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನಡೆದ ಕಾರ್ಪೊರೇಟರ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಮೇಯರ್ ಜಿ.ಪದ್ಮಾವತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ವಿಧಾನಸೌಧದ ಮುಂಭಾಗ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಧಿಮಂತ್ರಿಗಳು, ಮೇಯರ್ ಎದುರಾಗುತ್ತಿದ್ದಂತೆ ಶಾಸಕ ಮುನಿರತ್ನ ಬೆಂಬಲಿಗರು ಹಾಗೂ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ನಡುವಿನ ಗಲಾಟೆಗೆ ಕಾರಣವೇನು ಎಂದು ಪ್ರಶ್ನಿಸಿದರು. ತಾವು ಭಾಗವಹಿಸಿದ್ದ ಕಾರ್ಯಕ್ರಮದ ವೇಳೆ ಈ ರೀತಿಯ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕಿತ್ತಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತವಿದ್ದು, ಈ ರೀತಿಯ ಘಟನೆಗಳು ನಡೆದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪಾಲಿಕೆಯಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲರ ವಿಶ್ವಾಸ ಪಡೆಯದಿದ್ದರೆ ಪಕ್ಷದ ವರ್ಚಸ್ಸಿಗೂ ಹಾನಿಯಾಗುತ್ತದೆ ಎಂದು ಹೇಳಿದರು ಎನ್ನಲಾಗಿದೆ. ಇದರಿಂದ ಕೆಲಕಾಲ ತಬ್ಬಿಬ್ಟಾದ ಮೇಯರ್, ಬಳಿಕ ಅಂದಿನ ಘಟನೆ ಹಿಂದಿನ ಕಾರಣ ಹಾಗೂ ರಾಜಕೀಯ ಕಾರಣಗಳನ್ನು ವಿವರಿಸಿ ಸಮಾಧಾನಪಡಿಸಿದರು ಎಂದು ತಿಳಿದುಬಂದಿದೆ. ಹುತಾತ್ಮ ಯೋಧ ನಿರಂಜನ್ ಅವರ ಹೆಸರನ್ನು ವಿವಾದಿತ ಸ್ಥಳಕ್ಕೆ ಬದಲಾಗಿ ನಗರದ ಮತ್ತೂಂದು ಪ್ರಮುಖ ರಸ್ತೆಗೆ ನಾಮಕರಣ ಮಾಡಲಾಗುವುದು.
-ಕೆ.ಜೆ.ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ