Advertisement
ಏಕಮುಖ ಸಂಚಾರದ ಕುರಿತು ಕಳೆದ ನಾಲ್ಕು ದಿನಗಳ ಹಿಂದೆ ಉಪ್ಪಿನಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊಬೆಷನರಿ ಸಹಾಯಕ ಎಸ್‌ಪಿ ಪ್ರದೀಪ್ ಗುಂಟೆಯವರು ದಿಢೀರ್ ನಿರ್ಧಾರ ತೆಗೆದುಕೊಂಡಿದ್ದರು. ಇದನ್ನು ವರ್ತಕರು ಸಭೆಯಲ್ಲಿ ಖಂಡಿಸಿದ್ದರು. ಆದರೂ ಕೆಲವರು ಇದು ಒಳ್ಳೆಯ ಬೆಳವಣಿಗೆ ಎಂದಿದ್ದರು.
ಪಟ್ಟಣದ ಪ್ರವೇಶ ದ್ವಾರ, ಹಳೇ ಬಸ್ ನಿಲ್ದಾಣ ಜಂಕ್ಷನ್ ಸೇರಿದಂತೆ ಶೆಣೈ ನರ್ಸಿಂಗ್ ಹೋಮ್ ಜಂಕ್ಷನ್‌ಗಳ ಮೂರು ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ ದಿನದ ಪಾಳಿಗೆ ಆರು ಪೊಲೀಸರು ಹಾಗೂ ಆರು ಗೃಹರಕ್ಷಕ ದಳ ಸಿಬಂದಿ ಕರ್ತವ್ಯ ನಿರ್ವಹಿಸುತ್ತಾ, ಏಕಮುಖ ಸಂಚಾರ ನಿಯಮ ಪಾಲನೆಯಾಗುತ್ತಿತ್ತು. ಸಾರ್ವಜನಿಕರ ಮೆಚ್ಚುಗೆ
ರವಿವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಪೊಲೀಸ್, ಗೃಹರಕ್ಷಕ ಸಿಬಂದಿ ಕರ್ತವ್ಯದಲ್ಲಿರಲಿಲ್ಲ. ಹೀಗಿದ್ದರೂ ಚಾಲಕರು ಅಳವಡಿಸಿದ ಬ್ಯಾರಿಕೇಡ್, ಅದರ ಮೇಲೆ ಇದ್ದ ಸೂಚನ ಫಲಕಗಳನ್ನು ಕಂಡು ಸ್ವಯಂಪ್ರೇರಿತರಾಗಿ ನಿಯಮ ಪಾಲನೆ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
Related Articles
ಏಳು ದಿನಗಳವರೆಗೆ ಏಕಮುಖ ಸಂಚಾರ ಪ್ರಾಯೋಗಿಕವಾಗಿ ನಡೆಸಿ ಅದರ ಸಾಧಕ-ಬಾಧಕ ಕಲೆಹಾಕುವ ಪ್ರಯತ್ನವನ್ನು ಪೊಲೀಸ್ ಇಲಾಖೆ ನಡೆಸಿದೆ. ಬಳಿಕ ಮೇಲಾಧಿಕಾರಿಗಳಿಗೆ ವರದಿಯ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಪ್ರದೀಪ್ ಗುಂಟೆ ತಿಳಿಸಿದ್ದಾರೆ.
Advertisement