Advertisement

ಚಾಲಕರಹಿತ ಕಾರು ಆವಿಷ್ಕಾರ

11:01 AM Jul 22, 2018 | Team Udayavani |

ಬೆಂಗಳೂರು: ನಗರದ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಚಾಲಕರಹಿತ ರೋಬೊ ಕಾರು ಹಾಗೂ ಮೌಖೀಕವಾಗಿ ಹೇಳಿದ್ದನ್ನು ಟೈಪ್‌ ಮಾಡಿಕೊಳ್ಳುವ ಕಂಪ್ಯೂಟರ್‌ ಆವಿಷ್ಕರಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಲ್‌.ಶಿವಬಸಪ್ಪ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿ ಶಿವಶೇಸ್‌ ಬೋರಾ, ರೋಬೊಕಾರನ್ನು ಅಭಿವೃದ್ಧಿಪಡಿಸಿದ್ದು, ಜಿಪಿಎಸ್‌ ಆಧಾರಿತವಾಗಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಸಂಚಾರ ನಿಯಮಗಳ ಮಾಹಿತಿ ದಾಖಲಿಸಲಾಗಿದ್ದು, ಇದಕ್ಕೆಂದೇ ಪ್ರತ್ಯೇಕವಾದ ಸಣ್ಣ ಯಂತ್ರವನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ವಿದೇಶದಲ್ಲಿ ಇಂತಹ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಹೀಗಾಗಿ, ನಮ್ಮಲ್ಲಿಯೂ ನೂತನ ತಂತ್ರಜ್ಞಾನವನ್ನು ಪರಿಚಯಿಸುವ ಉದ್ದೇಶದಿಂದ ವಿದ್ಯಾರ್ಥಿ ಈ ಪ್ರಯತ್ನ ಕೈಗೊಂಡಿದ್ದಾರೆ ಎಂದರು. ವಿದ್ಯಾರ್ಥಿಗಳಾದ ರಿಷಿಕಾ ಎ.ಭಾರದ್ವಾಜ್‌, ತೇಜಸ್‌ ರಾವ್‌, ಪ್ರಜ್ವಲ್‌ ರೆಡ್ಡಿ ಮತ್ತು ಸಾಗರ್‌ ಅವರು ಮೌಖೀಕವಾಗಿ ಹೇಳಿದ್ದನ್ನು ಟೈಪ್‌ ಮಾಡಿಕೊಳ್ಳುವ ಕಂಪ್ಯೂಟರ್‌ ಅಭಿವೃದ್ಧಿಪಡಿಸಿದ್ದು, ಇದು ವಿಕಲಚೇತನರಿಗೆ ಅನುಕೂಲವಾಗುವ ವಿಶ್ವಾಸವಿದೆ. ಕಂಪ್ಯೂಟರ್‌ ಮುಂದೆ ಕುಳಿತು ಸನ್ನೆ ಮಾಡಿದರೆ ಅಥವಾ ಆಡುವ ಮಾತುಗಳನ್ನಾಧರಿಸಿ ತನ್ನಷ್ಟಕ್ಕೆ ಟೈಪ್‌ ಮಾಡಿಕೊಳ್ಳುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next