Advertisement

Rajasthan: ಎರಡು ಲಾರಿಗಳ ಮಧ್ಯೆ ಅಪಘಾತ; 2 ಗಂಟೆಗಳ ಕಾಲ ಬಾನೆಟ್​ನಲ್ಲಿ ಸಿಲುಕಿದ್ದ ಚಾಲಕ

02:47 PM Jun 27, 2023 | Team Udayavani |

ರಾಜಸ್ಥಾನ: ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು,ಸುಮಾರು 2 ಗಂಟೆಗಳ ಕಾಲ ಬಾನೆಟ್​ನಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಿದ ಘಟನೆ ಜೋಧ್‌ಪುರ-ಅಂಬಾಲಾ ಹೆದ್ದಾರಿಯ ಫತೇಪುರ್ ನಲ್ಲಿ ನಡೆದಿದೆ.

Advertisement

ಚಾಲಕನನ್ನು ಪಂಜಾಬ್ ನಿವಾಸಿ ಬಲರಾಜ್ ಸಿಂಗ್ ಎಂದು ಗುರುತಿಸಲಾಗಿದ್ದು, ಎರಡು ಗಂಟೆಗಳ ಪ್ರಯತ್ನದ ನಂತರ ಆತನನ್ನು ರಕ್ಷಿಸಲಾಯಿತು, ಆದರೆ ಘಟನೆಯಲ್ಲಿ ಅವರ ಎರಡೂ ಕಾಲುಗಳು ಮುರಿದಿವೆ ಎನ್ನಲಾಗಿದೆ.

ಜೋಧ್‌ಪುರ-ಅಂಬಾಲಾ ಹೆದ್ದಾರಿಯ ಫತೇಪುರ್-ಸಲಾಸರ್ ರಸ್ತೆಯ ಬಳಿ ಈ ಅಪಘಾತ ಸಂಭವಿಸಿದ್ದು, ಬಲರಾಜ್ ಸಿಂಗ್ ಬಾನೆಟ್‌ನಲ್ಲಿ ಸಿಲುಕಿಕೊಂಡಿದ್ದರು.

ರಸ್ತೆ ಅಪಘಾತದಲ್ಲಿ ಎರಡೂ ಟ್ರಕ್‌ಗಳ ಚಾಲಕ ಮತ್ತು ಕ್ಲೀನರ್ ಸೇರಿದಂತೆ ಇತರ ಮೂವರಿಗೆ ತೀವ್ರ ಗಾಯಗಳಾಗಿವೆ.

ಗಾಯಾಳುಗಳನ್ನು ಜೋಧಪುರದ ಕೈಲಾಶ್ (18), ಮಂಕಚಂದ್ (40) ಮತ್ತು ಬಲರಾಜ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಅಪಘಾತದ ನಂತರ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು, ಪೊಲೀಸರು ಮಧ್ಯಪ್ರವೇಶಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next