Advertisement
ತಾತ್ಕಾಲಿಕ ಮುನ್ನೆಚ್ಚರಿಕೆ ಕ್ರಮವಾಗಿ, ಮರಳು ತುಂಬಿದ ಚೀಲ, ಬ್ಯಾರಿಕೇಡ್, ರಿಫ್ಲೆಕ್ಟರ್ ಟೇಪ್ ಅಳವಡಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್, ಆಯುಕ್ತರು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಂತ ನಡೆದಿರುವ ಕಾಲುವೆ ಸೇರಿದಂತೆ ನಗರದಲ್ಲಿ ಈ ರೀತಿ ಅಪಾಯಕಾರಿಯಾಗಿರುವ ಎಲ್ಲ ರಾಜಕಾಲುವೆಗಳ ಪಕ್ಕದ ರಸ್ತೆಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಬಲವಾಗಿದೆ.
ಮೃತಪಟ್ಟ ಆಟೋರಿಕ್ಷಾ ಚಾಲಕ ದೀಪಕ್ ಆಚಾರ್ಯ ಅವರ ಕುಟುಂಬಸ್ಥರಿಗೆ ಪ್ರಾಕೃತಿಕ ವಿಕೋಪ ಪರಿಹಾರ ಸದ್ಯ ನೀಡಿಲ್ಲ. ಕೆಲವು ಪ್ರಕರಣಗಳಲ್ಲಿ ಘಟನೆ ನಡೆದ 24 ಗಂಟೆಗಳೊಳಗೆ ಪರಿಹಾರ ಧನ ನೀಡಲಾಗುತ್ತದೆ. ಆದರೆ ಇನ್ನು ಕೆಲವು ಘಟನೆಗಳಲ್ಲಿ ಕೂಡಲೇ ಪರಿಹಾರ ನೀಡುವುದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್, ಇನ್ಶೂರೆನ್ಸ್ ಮೊದಲಾದ ವಿಚಾರಗಳನ್ನು ಪರಿಶೀಲಿಸಿ ಅನಂತರ ಪರಿಹಾರ ನೀಡುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.