Advertisement

ಪಾರಂಪರಿಕ ಹಳ್ಳ ಸಂರಕ್ಷಣೆಗೆ ಚಾಲನೆ

02:56 PM Mar 28, 2017 | |

ಕಿದೂರು: ಎಷ್ಟು ಸೌಕರ್ಯಗಳಿದ್ದರೂ ಭೂಮಿಯಲ್ಲಿ ಮಾನವನೊಬ್ಬನಿಗೆ ಬದುಕಲು ಸಾಧ್ಯವಿಲ್ಲ. ಪ್ರಕೃತಿಯ ಪ್ರತಿಯೊಂದು ಜೀವಜಾಲಗಳಲ್ಲಿ ಒಬ್ಬನಾಗಿ ಮಾತ್ರ ಮನುಷ್ಯ ಜೀವನ ಹಸನಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರಕೃತಿಯನ್ನು ವಿಕೃತಗೊಳಿಸುವ ಮನಸ್ಥಿತಿಯ ವಿರುದ್ಧ ಅರಿವು ಮೂಡಿಸುವ ವಿಸ್ತೃತ  ಜನಾಂದೋಲನ ಆಗಬೇಕಿದೆ ಎಂದು ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎಲ್‌. ಪುಂಡರೀಕಾಕ್ಷ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕಿದೂರು ಸಮೀಪದ ಕಾಜೂರಿನ ಪಾರಂಪರಿಕ ಹಳ್ಳವನ್ನು ಪುನಶ್ಚೇತನ ಗೊಳಿಸಲು ಸ್ಥಳೀಯ ಎಸ್‌ಕೆಪಿ ಫ್ರೆಂಡ್ಸ್‌ ಕ್ಲಬ್‌ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಪ್ರಜ್ಞಾವಂತ ಯುವ ನಾಗರಿಕರು, ಸಾಮಾಜಿಕ ಸಂಘಟನೆಗಳಿಗೆ ಮಾದರಿಯಾಗಿ ಕಾಜೂರಿನ ಎಸ್‌ಕೆಪಿ ಫ್ರೆಂಡ್ಸ್‌ ಕ್ಲಬ್‌ನ ಹಳ್ಳ ಪುನಃಶ್ಚೇತನ ಚಟುವಟಿಕೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ಸಂಘಟನೆಯ ಚಟುವಟಿಕೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಹಿರಿಯರಾದ ಚಂದ್ರ ಕಾಜೂರು, ಸುಬ್ಬಯ್ಯ ಕುಲಾಲ್‌, ಜಲತಜ್ಞ ವಾಸುದೇವ ರಾವ್‌ ಮುಗು, ಎಸ್‌.ಕೆ.ಪಿ. ಫ್ರೆಂಡ್ಸ್‌ನ ಅಧ್ಯಕ್ಷ ಅನೀಶ್‌, ಪ್ರಧಾನ ಕಾರ್ಯದರ್ಶಿ ದಿನೇಶ್‌, ಖ್ಯಾತ ಹಿರಿಯ ಪಕ್ಷಿ ಪ್ರೇಮಿ ಮೇಕ್ಸಿಂ ರೋಡ್ರಿಗಸ್‌ ಕೊಲ್ಲಂಗಾನ ಮೊದಲಾದವರು ಉಪಸ್ಥಿತರಿದ್ದರು .ಕ್ಲಬ್‌ ಸದಸ್ಯರ ಸಹಿತ ಸ್ಥಳೀಯ 50 ಕ್ಕಿಂತಲೂ ಹೆಚ್ಚು ನಾಗರಿಕರು ಉಪಸ್ಥಿತರಿದ್ದು ಹಳ್ಳದ ಹೂಳೆತ್ತುವುದರಲ್ಲಿ ಸಹಕರಿಸಿದರು.

ಶಿಕ್ಷಕ, ಪರಿಸರ ಪ್ರೇಮಿ ರಾಜು ಸ್ಟೀವನ್‌ ಮಾಸ್ತರ್‌ ಪ್ರಾಸ್ತಾ ವಿಕವಾಗಿ ಮಾತನಾಡಿ ಯೋಜನೆಯ ಮಾಹಿತಿ ನೀಡಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next