Advertisement

ಹಳೆ ವಿದ್ಯುತ್‌ ತಂತಿ-ಕಂಬ ತೆರವಿಗೆ ಚಾಲನೆ

03:28 PM Jul 08, 2017 | |

ವಾಡಿ: ಶಿಥಿಲಾವಸ್ಥೆಗೆ ತಲುಪಿ ಆತಂಕ ಸೃಷ್ಟಿಸಿದ್ದ ಹಳಕರ್ಟಿ ಗ್ರಾಮದ ಹಳೆ ವಿದ್ಯುತ್‌ ತಂತಿ ಹಾಗೂ ಕಂಬಗಳ ತೆರವಿಗೆ ಕೊನೆಗೂ
ಜೆಸ್ಕಾಂ ಅಧಿಕಾರಿಗಳು ಮುಂದಾಗಿದ್ದು, ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.

Advertisement

ಗ್ರಾಮದಾದ್ಯಂತ ಅಳವಡಿಸಲಾಗಿರುವ ಹಲವು ವಿದ್ಯುತ್‌ ಕಂಬಗಳು ಮತ್ತು ತಂತಿ ಮೂರ್‍ನಾಲ್ಕು ದಶಕಗಳಷ್ಟು ಹಳೆಯದಾಗಿದ್ದು, 
ಶಿಥಿಲಾವಸ್ಥೆ ತಲುಪಿದ್ದವು. ವಿದ್ಯುತ್‌ ತಂತಿಗಳು ಗಾಳಿಗೆ ನೇತಾಡುತ್ತ ಕತ್ತರಿಸಿ ತುಂಡಾಗಿದ್ದರೆ, ಸಿಮೆಂಟ್‌ ಕಳಚಿ ರಾಡು ಕಾಣುತ್ತಿದ್ದ ಕಂಬಗಳು ಶಿಥಿಲಾವಸ್ಥೆಗೆ ತಲುಪಿದ್ದವು. ಇದರಿಂದ ವಿದ್ಯುತ್‌ ಹರಿದು ಅನೇಕರು ಅಪಾಯಕ್ಕಿಡಾದ ಪ್ರಕರಣಗಳು ಘಟಿಸಿದ್ದವು.
ಗ್ರಾಮದ ಎಲ್ಲ ಹಳೆಯ ಕಂಬ ಮತ್ತು ತಂತಿಗಳನ್ನು ಬದಲಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಎಸ್‌ಯುಸಿಐ (ಸಿ) ಕಮ್ಯುನಿಸ್ಟ್‌
ಪಕ್ಷದ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಜನರ ಕೂಗಿಗೆ ಸ್ಪಂದಿಸಿರುವ ಜೆಸ್ಕಾಂ ಇಲಾಖೆ, ಹಳೆ
ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದೆ. ತುಂಡಾದ ವಿದ್ಯುತ್‌ ತಂತಿಗಳನ್ನು ಬದಲಿಸಿ ಹೊಸ ತಂತಿ ಅಳವಡಿಕೆ ಮಾಡಲಾಗುತ್ತಿದ್ದು, ಜನರಲ್ಲಿದ್ದ ಆತಂಕ ದೂರಾಗಿದೆ. ಇದು ಗ್ರಾಮಸ್ಥರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಎಸ್‌ ಯುಸಿಐ (ಸಿ) ಪಕ್ಷದ ಸದಸ್ಯರಾದ ರಾಘವೇಂದ್ರ ಅಲ್ಲಿಪುರಕರ, ಶಿವುಕುಮಾರ ಅಂದೋಲಾ, ಭಾಗಣ್ಣ ಬುಕ್ಕಾ, ಚೌಡಪ್ಪ ಗಂಜಿ ಪ್ರತಿಕ್ರಿಯಿಸಿದ್ದಾರೆ. 

ಗ್ರಾಮದಲ್ಲಿ ಒಟ್ಟು 200ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳಿದ್ದು, 30ಕ್ಕೂ ಹೆಚ್ಚು ಕಂಬಗಳು ಶಿಥಿಲಗೊಂಡಿವೆ. ಅನೇಕ ಕಡೆ ವಿದ್ಯುತ್‌ ತಂತಿ
ಕತ್ತರಿಸಿವೆ. ಅವುಗಳೆಲ್ಲವನ್ನು ಬದಲಿಸಲಾಗುವುದು. ಸುಮಾರು ಒಂದು ವಾರಗಳ ಕಾಲ ಹಳಕರ್ಟಿ ಗ್ರಾಮದಲ್ಲಿ ವಿದ್ಯುತ್‌ ಕಂಬಗಳ
ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಲೈನ್‌ಮೆನ್‌ ಶರಣಪ್ಪ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next