Advertisement

ಪ್ರಥಮ ಹಂತದ ಮಿಯಾವಾಕಿ ವನ ನಿರ್ಮಾಣಕ್ಕೆ ಚಾಲನೆ

12:50 AM Oct 15, 2019 | Team Udayavani |

ಕಟಪಾಡಿ: ಮೊದಲನೇ ಹಂತದ ಖಾಸಗಿ ಮಿಯಾವಾಕಿ ವನ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡು ಅವರು ಕಟಪಾಡಿ ಬಳಿಯ ಪೊಸಾರಿನ ಮಹೇಶ್‌ ಶೆಣೈ ಅವರ ಮನೆಯ ಪರಿಸರದಲ್ಲಿ ಚಾಲನೆ ನೀಡಿದರು.

Advertisement

ಪರಿಸರ ಮಾಲಿನ್ಯ, ಅಂತರ್‌ ಜಲವೃದ್ಧಿ, ಹೆಚ್ಚುತ್ತಿರುವ ಭೂಮಿಯ ತಾಪಮಾನ ಇಂತಹ ಹತ್ತು ಹಲವಾರು ಸಮಸ್ಯೆಗೆ ಪರಿಹಾರವೇ “ಮಿಯಾವಾಕಿ ಕಾಡು”. ಈ ವಿಧಾನವು ಭಾರತದ ಪಂಜಾಬ್‌, ಮುಂಬೈ, ಬೆಂಗಳೂರು ಮುಂತಾದ ಕಡೆಗಳಲ್ಲಿ ಜನಪ್ರಿಯವಾಗಿದೆ.

ಅತ್ಯಂತ ಕಡಿಮೆ ಸ್ಥಳದಲ್ಲಿ ಖಾಸಗಿ ಅರಣ್ಯವನ್ನು ನಿರ್ಮಿಸಬಹುದಾಗಿದೆ.ಈ ವಿಧಾನದಲ್ಲಿ ಕೇವಲ ಮೂರು ಸೆಂಟ್ಸ್‌ ಜಾಗದಲ್ಲಿ 400 ಮರಗಳನ್ನು ನೆಡಬಹುದಾಗಿದೆ ಮತ್ತು ಈ ವಿಧಾನವನ್ನು ಕರಾವಳಿಯಲ್ಲಿ ಮೊದಲ ಬಾರಿಗೆ “ಸಾವಯವ ಬದುಕು ”ತಂಡ ಪರಿಚಯಿಸುತ್ತಿದೆ ಎಂದು ಕೆ. ಮಹೇಶ್‌ ಶೆಣೈ ತಿಳಿಸಿದರು.

ಇದರಲ್ಲಿ ಎರಡು ಹಂತಗಳಿದ್ದು ಮೊದಲನೇ ಹಂತದಲ್ಲಿ ಗಿಡ ಮರ ನೆಡಲು ಬೇಕಾಗುವಂತಹ ಮಣ್ಣಿನ ಪದರವನ್ನು ರಚಿಸುವುದು ಮತ್ತು ಎರಡನೇ ಹಂತದಲ್ಲಿ ಸಸಿಗಳನ್ನು ನೆಡುವ ಅಭಿಯಾನ ನಡೆಯಲಿದೆ. ಎರಡನೇ ಹಂತದಲ್ಲಿ ಎರಡು ಸೆಂಟ್ಸ್‌ ಜಾಗದಲ್ಲಿ 260 ಸಸಿಗಳನ್ನು ನೆಡುವ ಉದ್ದೇಶ ಇದ್ದು ,ಇದು ಡಿಸೆಂಬರ್‌ ತಿಂಗಳ ಎರಡನೇ ವಾರದಲ್ಲಿ ನಡೆಯಲಿದೆ.

ಸರಿ ಸುಮಾರು 260 ಸಾಮಾಜಿಕ ಕಳಕಳಿ ಉಳ್ಳ ವ್ಯಕ್ತಿಗಳನ್ನು ಆಹ್ವಾನಿಸಿ ಮರದ ಸಸಿಗಳನ್ನು ನೆಟ್ಟು ಕಡಿಮೆ ಜಾಗದಲ್ಲಿ ಶೀಘ್ರವಾಗಿ ಬೆಳೆಯುವ ದಟ್ಟ ಅರಣ್ಯ ನಿರ್ಮಾಣಕ್ಕೆ ಚಾಲನೆ ನೀಡುವ ಉದ್ದೇಶ ಇದೆ ಎಂದು ತಿಳಿಸಿದರು. ಪ್ರಮುಖರಾದ ರವಿ ಕಟಪಾಡಿ, ಗಣೇಶ ರಾಜ್‌ ಸರಳಬೆಟ್ಟು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next