ಬೆಂಗಳೂರು: ಇದೇ ಮೊಟ್ಟ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ರಾಷ್ಟ್ರೀಯ ಮಟ್ಟದ ಅಮೆರಿಕನ್ ಫುಟ್ಬಾಲ್ (ಟ್ಯಾಕಲ್ ಪುಟ್ಬಾಲ್ ) ಚಾಂಪಿಯನ್ ಶಿಪ್ ಗೆ ಚಾಲನೆ ದೊರೆತಿದೆ.. ಯಲಹಂಕದ ಬಳಿ ಇರೋ ನಾಗರ್ಜುನ ಪದವಿ ಕಾಲೇಜಿನ ಮೈದಾನದಲ್ಲಿ (ಕೆಎಫ್ ಎಎಫ್ ಎ)ಕರ್ನಾಟಕ ಪ್ಲ್ಯಾಗ್ ಮತ್ತು ಅಮೆರಿಕನ್ ಪುಟ್ಬಾಲ್ ಅಸೊಶಿಯೇಶನ್ ಸಹಭಾಗಿತ್ವದಲ್ಲಿ ಪಂದ್ಯಾವಳಿಯನ್ನ ಆಯೋಜನೆ ಮಾಡಲಾಗಿದೆ..
ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್ ಒಲಿಂಪಿಕ್ ಅಸೊಶಿಯೇಶನ್ ನ ಜಂಟಿ ಕಾರ್ಯದರ್ಶಿ ನಾಮ್ ದೇವ್ ಶಿರ್ ಗಾಂವ್ಕರ್, ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿ ದೈಹಿಕ ವಿಭಾಗದ ನಿರ್ದೇಶಕರಾದ ಪಾಟೀಲ್ ಮೊಹಮ್ಮದ್ ಇಲೈಸ್, ಅರ್ಜುನ ಪ್ರಶಸ್ತಿ ವಿಜೇತರಾದ ಎಸ್ ಪ್ರಕಾಶ್, ಕೆಎಫ್ ಎ ಎಫ್ ಎ ನ ಅಧ್ಯಕ್ಷ ಸತೀಶ್ ಎಂ ಗೌಡ ಕಾರ್ಯದರ್ಶಿ ಕಾರ್ಯದರ್ಶಿ ನಾಗರ್ಜುನ ಕೆ ಎಂ ಎಮ್ ಎಪ್ ನ ಅದ್ಯಕ್ಷ ಸತೀಶ್ ಎಂ ಗೌಡ, ಕಾಲೆಜಿನ ನಿರ್ದೇಶಕ ಮನೋಹರ್ ನರಜೀ ಮತ್ತಿತರ ಗಣ್ಯರು ಉಪಸ್ಥಿತರಿದ್ದರು..
ಒಟ್ಟು ಎರಡು ದಿನಗಳ ಕಾಲ ನಡೆಯುತ್ತಿರೋ ರಾಷ್ಟ್ರೀಯ ಮಟ್ಟದ ಅಮೆರಿಕನ್ ಪುಟ್ಬಾಲ್ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡು, ಆಂದ್ರ, ತೆಲಂಗಾಣ, ಕೇರಳ, ದೆಹಲಿ ರಾಜಸ್ಥಾನ ಸೇರಿದಂತೆ ೧೪ ರಾಜ್ಯದ ತಂಡಗಳು ಪ್ರಶಸ್ತಿಗಾಗಿ ಕಾದಟ ನಡೆಸಲಿವೆ..
ನ್ಯಾಷಿನಲ್ ಲೆವೆಲ್ ಅಮೆರಿಕನ್ ಪುಟ್ಬಾಲ್ ಚಾಂಪಿಯನ್ಸ್ ಶಿಫ್ ನ ಉದ್ಘಾಟನೆಯನ್ನ ಗಣ್ಯರು ನೆರವೆರಸಿ, ಇದೊಂದು ಉತ್ತಮ ಅಂತರರಾಷ್ಟ್ರೀಯ ಕ್ರೀಡೆ..ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡೆ ಬಗ್ಗೆ ಆಸಕ್ತಿ ತೊರುತ್ತಿದ್ದಾರೆ.. ಅಮೆರಿಕನ್ ಪುಟ್ಬಾಲ್ ದೇಶದಲ್ಲಿ ಜನಪ್ರಿಯತೆಯನ್ನ ಗಳಿಸುತ್ತಿದ್ದು ಆಟಗಾರರಿಗೆ ಉತ್ತಮ ಅವಕಾಶಗಳು ದೊರೆಯುತಿದೆ.. ಇನ್ನಷ್ಟು ಟೂರ್ನಿಮೆಂಟ್ ಗಳು ಆಯೋಜನೆಯಾಗಬೇಕು ಇದ್ರಿಂದ ಅಮೆರಿಕನ್ ಪುಟ್ಬಾಲ್ ಆಟಗಾರರಿಗೆ ಪ್ರೋತ್ಸಾಹ ದೊರೆತು ಉತ್ಸಹ ಮತ್ತಷ್ಟು ಹೆಚ್ಚಾಗುತ್ತದೆ ಅಂತಾ ಗಣ್ಯರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ರು..
ಇನ್ನೂ ಉದ್ಘಾಟನಾ ಸಮಾರಂಭದಲ್ಲಿ ಕೆಎಫ್ ಎಎಫ್ ಎ ನ ಸದಸ್ಯರು ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಿ ಗೌರವ ಸಮರ್ಪಿಸಿದ್ರು..
ಯುಎಎಸ್ ನಲ್ಲಿ ಅತಿಹೆಚ್ಚು ಜನಪ್ರೀಯವಾಗಿರೋ ಅಮೆರಿಕನ್ ಪುಟ್ಬಾಲ್ಗೆ ಇತ್ತಿಚೀನ ದಿನದಗಳಲ್ಲಿ ರಾಜ್ಯದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ.. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಟಗಾರರು ಗುರುತಿಸಿಕೊಳ್ಳುತ್ತಿದ್ದಾರೆ.. ಇದು ನಮ್ಮ ದೇಶಕ್ಕೆ ಹೊಸ ಮಾದರಿಯ ಕ್ರೀಡೆ.. ಅಮೆರಿಕನ್ ಟ್ಯಾಕಲ್ ಪುಟ್ಬಾಲ್ ನ ನೋಡೆದೇ ಒಂದು ಹಬ್ಬದಂತೆ..
ಇದೇ ಮೊದಲ ಬಾರಿಗೆ ಸಿಲಿಕಾನ್ ಸಿಟಿ ಇತಂಹ ಕ್ರೀಡೆಗೆ ವೇದಿಕೆಯನ್ನ ನಿರ್ಮಾಣ ಮಾಡಿದ್ದು,ಕರ್ನಾಟಕ ಪ್ಲ್ಯಾಗ್ ಅಂಡ್ ಅಮೆರಿಕನ್ ಪುಟ್ಬಾಲ್ ಅಸೋಸಿಯೇಷನ್ ಈ ಕ್ರೀಡಾಕೂಟವನ್ನ ಆಯೋಜನೆ ಮಾಡಿದ್ದು, ಕೆಎಫ್ ಎ ಎಫ್ ಎ ನ ಅಧ್ಯಕ್ಷ ಸತೀಶ್ ಎಂ ಗೌಡ ಕಾರ್ಯದರ್ಶಿ ಮೊಹಮ್ಮದ್ ಸಿಬ್ಗಾತುಲ್ಲಾ ಕ್ರೀಡಾಕೂಟದ ಜವಾಬ್ದಾರಿಯನ್ನ ಹೊತ್ತಿದ್ದಾರೆ..