Advertisement

ಅತ್ಯಾಧುನಿಕ 3ಡಿ ಮುದ್ರಣ ಸೌಲಭ್ಯಕ್ಕೆ ಚಾಲನೆ

05:49 PM Jul 28, 2022 | Team Udayavani |

ದೇವನಹಳ್ಳಿ: ಅತ್ಯಾಧುನಿಕ 3ಡಿ ಮುದ್ರಣ ಸೌಲಭ್ಯವು ಈಗ ಬೆಂಗಳೂರು ವಿಮಾನ ನಿಲ್ದಾಣದ ಆವರಣದ ಏರ್‌ಪೋರ್ಟ್‌ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೀಕೇ ಗ್ರೂಪ್‌ ಬೆಂಗಳೂರು ಏರ್‌ಪೋರ್ಟ್‌ ಸಿಟಿ ಲಿಮಿಟೆಡ್‌ (ಬಿಎಸಿಎಲ್) ಸಹಯೋಗದಲ್ಲಿ ಈ ವಿನೂತನ ಬಗೆಯ ಸೌಲಭ್ಯವನ್ನು ಉದ್ಘಾಟಿಸಿದ್ದು, ಇದು ಎಂಜಿನಿಯರಿಂಗ್‌, ಡಿಸೈನ್‌ ಮತ್ತು ಸಹಯೋಗಕ್ಕೆ ಆದ್ಯತೆ ನೀಡುತ್ತಿದೆ.

Advertisement

ಈ ಕುರಿತು ಬಿಎಸಿಎಲ್‌ನ ರಾವ್‌ ಮುನುಕುಟ್ಲ ಮಾತನಾಡಿ, ಏರ್‌ಪೋರ್ಟ್‌ ಸಿಟಿಯಲ್ಲಿ ಈ ಅತ್ಯಾಧುನಿಕ 3ಡಿ ಪ್ರಿಂಟಿಂಗ್‌ ಸೌಲಭ್ಯವು ಮತ್ತು ಪೀಕೇ ಗ್ರೂಪ್‌ ಸಹಯೋಗದಲ್ಲಿ ಉದ್ಘಾಟಿಸಲು ಸಹಯೋಗ ಹೊಂದಿದ್ದೇವೆ. ಈ ಸೌಲಭ್ಯವು ನಮ್ಮ ಏರ್‌ಪೋರ್ಟ್‌ ಸಿಟಿಯನ್ನು ತಾಂತ್ರಿಕ ಕೇಂದ್ರವಾಗಿ ಪರಿವರ್ತಿಸಲು ವೇಗ ವರ್ಧಕವಾಗಿ ನೆರವಾಗಲಿದೆ. ಆರೋಗ್ಯ ಸೇವೆಯಿಂದ ಸುಸ್ಥಿರ ನಿರ್ಮಾಣ ಮತ್ತು ವೈಮಾನಿಕ ಕ್ಷೇತ್ರದವರೆಗೆ 3ಡಿ ಪ್ರಿಂಟಿಂಗ್‌ ಸೃಜನಶೀಲತೆಯ ಸಂಸ್ಕೃತಿಯನ್ನು  ಅಭಿವೃದ್ಧಿಪಡಿಸಲು ಮತ್ತು ಎಲ್ಲ ಕೈಗಾರಿಕೆಗಳಲ್ಲಿ ಆವಿಷ್ಕಾರ ಹೆಚ್ಚಿಸುವ ವ್ಯಾಪ್ತಿ ಇದೆ ಎಂದರು.

ಈ ತಂತ್ರಜ್ಞಾನವು ಬೆಂಗಳೂರನ್ನು ಜ್ಞಾನಾಧಾರಿತ ಅರ್ಥವ್ಯವಸ್ಥೆಯ ಕಾರ್ಯತಂತ್ರೀಯ ಸ್ಥಾನವನ್ನು ಮತ್ತು ಭಾರತದ ಸಿಲಿಕಾನ್‌ ವ್ಯಾಲಿಯಾಗಿ ಮತ್ತಷ್ಟು ಕ್ರೂಢೀಕರಿಸಲು ನೆರವಾಗುತ್ತದೆ. ಈ ತಂತ್ರಜ್ಞಾನ ಕೇಂದ್ರವು ಮುಂದಿನ ವಿಶ್ವಮಟ್ಟದ ರೀಟೇಲ್ , ಡೈನಿಂಗ್‌ ಮತ್ತು ಮನರಂಜನೆಯ ಸೌಲಭ್ಯಗಳಿಂದ ನಮ್ಮ ಏರ್‌ಪೋರ್ಟ್‌ ಸಿಟಿಯಲ್ಲಿ ನಿಜಕ್ಕೂ ಜಾಗತಿಕ ತಾಣವಾಗಿಸುತ್ತದೆ ಎಂದರು.

ಯುವಜನರಲ್ಲಿ ಉತ್ಸಾಹ ತುಂಬಲು ಸಹಕಾರಿ: ಪೀಕೇ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಇ. ಶಾನವಾಜ್‌ ಮಾತನಾಡಿ, ನಮ್ಮ ವಿಸ್ತಾರ ಅನುಭವ ಮತ್ತು ಗುಣಮಟ್ಟ, ಪೂರೈಕೆ ಹಾಗೂ ವೆಚ್ಚದ ಮೇಲಿನ ಗಮನದ ಮೂಲಕ ನಾವು ಕಳೆದ ಕೆಲ ದಶಕಗಳಿಂದ ನಿರ್ಮಿಸಿದ್ದು, ಪೀಕೇ ಕೌಶಲ್ಯಾಭಿವೃದ್ಧಿ, ವಿನ್ಯಾಸ ಆಧರಿತ ಆಲೋಚನೆ ಮತ್ತು ಗ್ರಾಹಕರ ಅನುಕೂಲಕ್ಕೆ ಉತ್ಪನ್ನಗಳ ಗರಿಷ್ಠಗೊಳಿಸುವಿಕೆಗೆ ಅಪಾರ ಕೊಡುಗೆ ನೀಡಬಲ್ಲದು. ಅಲ್ಲದೆ ನಾವು ವಿವಿಧ ತರಬೇತಿ
ಕಾರ್ಯಕ್ರಮ ನೀಡಲು ಮತ್ತು ಇಂದಿನ ಯುವಜನರಲ್ಲಿ ಉತ್ಸಾಹ ಮತ್ತು ಸೃಜನಶೀಲತೆ ಹುಟ್ಟುಹಾಕಲು ವಿನ್ಯಾಸ ಆಧರಿತ ತಾರ್ಕಿಕತೆಯನ್ನು ಎಲ್ಲ ಉತ್ಪಾದನೆ ಪ್ರಕ್ರಿಯೆಗಳಲ್ಲಿ ಬಳಸಲು ವಿಶ್ವದ ಖ್ಯಾತ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಹೊಂದಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next