Advertisement

ಶ್ರೀ ಗದ್ದೆಮ್ಮ ದೇವಿ ಜಾತ್ರೆಗೆ ಚಾಲನೆ

11:21 AM Jan 14, 2019 | |

ನಾರಾಯಣಪುರ: ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಈ ಭಾಗದ ಆರಾದ್ಯ ದೈವ, ಶಕ್ತಿಮಾತೆ ದೇವರಗಡ್ಡಿ ಶ್ರೀ ಗದ್ದೆಮ್ಮ ದೇವಿ ಜಾತ್ರೆಯು ಪ್ರತಿ ವರ್ಷದ ಬನದ ಹುಣ್ಣಿಮೆ ದಿನ ಜರುಗಲಿದ್ದು. ಶಕ್ತಿ ದೇವಿಯ ಜಾತ್ರಾಮಹೋತ್ಸವನ್ನು ಶ್ರದ್ಧಾ ಭಕ್ತಿಯಿಂದ, ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜಂಗಿನಗಡ್ಡಿ ಗ್ರಾಮವು ಸಜ್ಜಾಗಿದೆ.

Advertisement

ವಿಳ್ಯದೆಲೆ ಅಲಂಕಾರ: ಕಾರ್ತಿಕೋತ್ಸವ ದಿನವಾದ ಶನಿವಾರ ರಾತ್ರಿ ದೇಗುಲದ ಪೂಜಾರಿಗಳಿಂದ ದೇವಿಗೆ ವಿಶೇಷ ವಿಳ್ಯದೆಲೆ ಅಲಂಕಾರ ನೆರವೇರಿಸಿ ಪೂಜೆಗೈದು, ದೇಗುಲದ ಆವರಣದಲ್ಲಿ ಹಣತೆಗಳನ್ನು ಬೆಳಗಿಸುವ ಮೂಲಕ ದೇವಿಯ ಜಾತ್ರೆಗೆ ಅದ್ಧೂರಿ ಚಾಲನೆ ದೊರೆತಿದೆ.

ಸಕಲ ಸಿದ್ದತೆ: ಐದು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವ ಆಚರಣೆಗೆಂದು ಯಾದಗಿರಿ ಜಿಲ್ಲೆಯ ಗಡಿ ಗ್ರಾಮವಾದ ಜಂಗಿನಗಡ್ಡಿ ಗ್ರಾಮ ಸೇರಿದಂತೆ ದೇವಿಗೆ ಉಡಿ ತುಂಬುವ ಏಳು ಗ್ರಾಮಗಳ ಜನತೆ ಸಕಲ ರೀತಿಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಈ ಮೂಲಕ ಜಾತ್ರೆ ಆಚರಣೆ ಸಡಗರದಲ್ಲಿದ್ದಾರೆ.

ಈಗಾಗಲೇ ಇಡೀ ಗ್ರಾಮದ ಜನತೆ ತಮ್ಮ ಮನೆಗಳನ್ನು ಶುಭ್ರಗೊಳಿಸುವ, ಸುಣ್ಣ ಬಣ್ಣ ಸೇರಿದಂತೆ ಗ್ರಾಮದ ಬೀದಿಗಳನ್ನು ತಳಿರು ತೋರಣಗಳಿಂದ ಶೃಂಗಾರಗೊಳಿಸುವ ತಯಾರಿ ನಡೆಸಿದ್ದು. ಗ್ರಾಪಂತಿಯವರು ಕೂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ವಹಣೆ, ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರಿನ, ವಿದ್ಯುತ್‌ ದೀಪಗಳ ಅಳವಡಿಸುವ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ. ಈ ಒಂದು ಜಾತ್ರಾಮಹೋತ್ಸವದಲ್ಲಿ ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟ ಜಿಲ್ಲೆಗಳಿಂದ ಸಹಸ್ರ ಸಂಖ್ಯೆಯಲ್ಲಿ ದೇವಿ ಭಕ್ತರು ಆಗಮಿಸಿ ಶ್ರೀ ಗದ್ದೆಮ್ಮ ದೇವಿ ದರ್ಶನ ಪಡೆದು ಹರಕೆಗಳನ್ನು ಸಲ್ಲಿಸಿ, ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next