Advertisement
ಈ ಸಮಸ್ಯೆ ಹೋಗಲಾಡಿಸಿ ಜನರನ್ನು ಎಚ್ಚರಿಸುವ ನಿಟ್ಟಿನಲ್ಲಿ ಸರಕಾರ ಜೀವನಿ 2020-21, ನಮ್ಮ ಕೃಷಿ ನಮ್ಮ ಆರೋಗ್ಯ ಎಂಬ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಜಾರಿಗೊಳಿಸಿದೆ. ಆದರೆ ಬದಿಯಡ್ಕ ಪಂಚಾಯತ್ ಈ ಯೋಜನೆಯನ್ನು ಮನೆಮನೆಗಳಿಗೂ ತಲುಪುವ ಉದ್ದೇಶದಿಂದ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೇರಳ ರಾಜ್ಯ ಕೃಷಿ ಇಲಾಖೆಯು ಮೊದಲ ಹಂತದಲ್ಲಿ ಜನಪ್ರತಿನಿಧಿಗಳ ಮತ್ತು ಪತ್ರಕರ್ತರ ಮನೆಗಳಲ್ಲಿ ಈ ಪದ್ಧತಿಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದೆ.
ಬದಿಯಡ್ಕ ಕೃಷಿ ಇಲಾಖೆಯ ಸಹಕಾರದೊಂದಿಗೆ ಬದಿಯಡ್ಕ ಪಂಚಾಯತ್ ನೇತƒತ್ವದಲ್ಲಿ ಮನೆಮನೆಯಲ್ಲೂ ಜೈವಿಕ ಕೃಷಿ ಬೆಳೆಸುವ ಈ ಸತ್ಕಾರ್ಯಕ್ಕೆ ಬೆಂಬಲ ಸೂಚಿಸಿದ್ದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಅಗತ್ಯವಿರುವ ತರಕಾರಿ ಬೆಳೆಯುವ ಭರವಸೆ ನೀಡಿದ್ದಾರೆ. ಆರೋಗ್ಯವನ್ನು ಸಂರಕ್ಷಿಸುವ ಪದ್ಧತಿಗಳು ಈ ಕಾಲಘಟ್ಟದಲ್ಲಿ ಅತೀ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Related Articles
Advertisement
420 ದಿವಸಗಳ ಬೃಹತ್ ಪದ್ಧತಿಜೀವನಿ 2020-21 ಪದ್ಧತಿಯು 1-1-2020 ರಿಂದ 2021 ವಿಷು ಹಬ್ಬದ ವರೆಗಿನ 420 ದಿನಗಳ ಬƒಹತ್ ಪದ್ಧತಿಯಾಗಿದ್ದು 2021ರ ವಿಷು ಹಬ್ಬಕ್ಕಾಗುವಾಗ ಕೇರಳದ ಮನೆಮನೆಗಳಲ್ಲೂ ಜೈವಿಕವಾಗಿ ಬೆಳೆದ ತರಕಾರಿ ಲಭ್ಯವಾಗುವಂತೆ ಮಾಡುವುದೇ ಇದರ ಉದ್ಧೇಶವಾಗಿದೆ. ಈ ರೀತಿ ಕೃಷಿ ಮಾಡುವ ಮೂಲಕ ಶುದ್ಧ ಗಾಳಿಯನ್ನು ಉಸಿರಾಡುವುದೂ ಸಾಧ್ಯಾವಾಗುತ್ತದೆ. ಆ ಮೂಲಕ ಆರೋಗ್ಯ ಸಂರಕ್ಷಣೆಯ ಕೆಲಸ ಸುಲಭವಾಗುತ್ತದೆ ಎಂಬ ದೂರದೃಷ್ಠಿಯ್ನು ಕೃಷಿ ಇಲಾಖೆ ಹೊಂದಿದೆ. ಉಪಯುಕ್ತ ಯೋಜನೆ
ಕೃಷಿಗೆ ಪ್ರೋತ್ಸಾಹ ನೀಡುವ ಈ ಪದ್ಧತಿ ಜನರನ್ನು ಜಾಗƒತರನ್ನಾಗಿಸುತ್ತದೆ. ಆರೋಗ್ಯವಂತ ಸಮಾಜಕ್ಕಾಗಿ ಈಗ ಪ್ರಯತ್ನಿಸದಿದ್ದರೆ ಮುಂದೆ ಜನರ ಆರೋಗ್ಯ ಮತ್ತು ಆಯುಸ್ಸು ಎರಡೂ ಕಡಿಮೆಯಾಗುತ್ತದೆ. ಆದುದರಿಂದ ಕೃಷಿ ಇಲಾಖೆ ಫಲಪ್ರದವಾದ, ಉಪಯುಕ್ತವಾದ ಹಲವಾರು ಯೋಜನೆಗಳನ್ನು ಹೊರತರುತ್ತಿದೆ.
– ಮೋಹನನ್, ಸಹಾಯಕ ಕೃಷಿ ಅಧಿಕಾರಿ, ಬದಿಯಡ್ಕ ಕೃಷಿ ಇಲಾಖೆ