ದಿನವನ್ನಾಗಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಅದ್ಧೂರಿ ಕಾರ್ಯಕ್ರಮ ಏರ್ಪಡಿಸಲು ಸಿದ್ಧತೆ ನಡೆಸಿದೆ. ಜುಲೈ 1ರಿಂದ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಜಾರಿಯಾಗಲಿದ್ದು, ಜೂನ್ 30ರಂದು ಮಧ್ಯರಾತ್ರಿಯೇ ಇದಕ್ಕೆ
ವೈಭವದ ಚಾಲನೆ ಸಿಗಲಿದೆ. ಇದಕ್ಕೆ ಸಾಕ್ಷಿಯಾಗಲು ಸಂಸತ್‌ನ ಸೆಂಟ್ರಲ್ ಹಾಲ್ ಸಿದ್ಧವಾಗುತ್ತಿದೆ. ದೇಶದ 2 ಲಕ್ಷಕೋಟಿ ಡಾಲರ್‌ನ ಆರ್ಥಿಕತೆಯಲ್ಲಿ ಹೊಸ ಹೆಜ್ಜೆ ಎಂದು ಪರಿಗಣಿಸಲಾಗಿರುವ ಜಿಎಸ್‌ಟಿಯ ಚಾಲನೆ ಕಾರ್ಯಕ್ರಮವು ಸೆಂಟ್ರಲ್ ಹಾಲ್‌ನಲ್ಲಿ ಜೂ.30ರ ಮಧ್ಯರಾತ್ರಿ 11 ಗಂಟೆಗೆ ಆರಂಭವಾಗಲಿದೆ. 12 ಗಂಟೆ
ಹೊಡೆಯುತ್ತಿದ್ದಂತೆ, ಜಾಗಟೆ ಬಡಿಯುವ ಮೂಲಕ ಜಿಎಸ್‌ಟಿಯ ಆಗಮನವಾಯಿತು ಎಂದು ಸಾರಲಾಗುತ್ತದೆ. ನಂತರ ಪ್ರಧಾನಿ ಮೋದಿ ಅವರು ಈ ಕುರಿತು ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ಆಹ್ವಾನ ನೀಡಲಾಗಿದೆ. ಜತೆಗೆ, ಮಾಜಿ ಪ್ರಧಾನಿಗಳಾದ ಮನಮೋಹನ್‌ಸಿಂಗ್, ಎಚ್.ಡಿ.ದೇವೇಗೌಡ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement