Advertisement
ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ. ಅವಳಿ ಹಳಿ ನಿರ್ಮಾಣಕ್ಕೆ ಬೇಕಾದಷ್ಟು ಜಾಗ ನಿಗಮವು ಹೊಂದಿದೆ. ಈ ಮಧ್ಯೆ ದ. ರೈಲ್ವೇ ವಿಭಾಗದ ವತಿಯಿಂದ ಕೇರಳದ ಶೋರ್ನೂರು ಮತ್ತು ಮಂಗಳೂರು ಮಧ್ಯೆ 328 ಕಿ. ಮೀ. ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಮಂಗಳೂರು ಜಂಕ್ಷನ್ (ಕಂಕನಾಡಿ) ವರೆಗೆ ಪೂರ್ಣಗೊಂಡಿದ್ದು, ತೋಕೂರುವರೆಗೆ ಮುಂದುವರಿಯಲಿದೆ. ಅಲ್ಲಿಂದ ಮಹಾರಾಷ್ಟ್ರದ ರೋಹಾದವರೆಗೆ ಕೊಂಕಣ ರೈಲ್ವೇ ನಿಗಮವು ವಿದ್ಯುದೀಕರಣಗೊಳಿಸಲಿದೆ. ರೋಹಾದಿಂದ ವರ್ನಾವರೆಗೆ ಹಾಗೂ ವರ್ನಾದಿಂದ ತೋಕೂರು ಸೇರಿದಂತೆ ಎರಡು ಹಂತಗಳಲ್ಲಿ ಈ ಕಾಮಗಾರಿಯನ್ನು ಪ್ರತ್ಯೇಕ ಗುತ್ತಿಗೆದಾರರಿಗೆ ವಹಿಸಲಾಗಿದೆ. ಸುಮಾರು 950 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿ ಎರಡೂ ಭಾಗಗಳಲ್ಲಿ ಪ್ರಗತಿಯಲ್ಲಿದೆ. ವಿದ್ಯುದೀಕರಣಕ್ಕಾಗಿ ರೈಲ್ವೇ ಹಳಿಯ ಪಕ್ಕದಲ್ಲಿ ಅಡಿಪಾಯ ಹಾಕುವ ಕೆಲಸ ನಡೆಯುತ್ತಿದ್ದು, ಮುಂದೆ ಕಂಬಗಳನ್ನು ಕ್ರೇನ್‌ಗಳ ಸಹಾಯದಿಂದ ಜೋಡಿಸಲಾಗುವುದು. ರಾಜ್ಯ ಸರಕಾರವೂ ಇದಕ್ಕೆ ಅನುದಾನ ಒದಗಿಸಲಿದೆ.
ರೈಲಿಗೆ ಪೆಟ್ರೋಲಿಯಂ ಮೂಲದ ಇಂಧನದ ಬದಲು ವಿದ್ಯುತ್ಛಕ್ತಿಯ ಬಳಕೆ ಪರಿಸರ ಸ್ನೇಹಿ. ಡೀಸೆಲ್ ಚಾಲಿತ ರೈಲು ಎಂಜಿನ್ ಬಂದ ಬಳಿಕ ಕಲ್ಲಿದ್ದಲಿನ “ಉಗಿಬಂಡಿ’ ಇತಿಹಾಸಕ್ಕೆ ಸೇರಿತು. ಈಗ ಡೀಸೆಲ್ ಮತ್ತು ವಿದ್ಯುತ್‌ಚಾಲಿತ ಇಂಜಿನ್‌ಗಳು ಬಳಕೆಯಲ್ಲಿವೆ. ಡೀಸೆಲ್ ಇಂಜಿನ್‌ಗಳಿಂದ ಪರಿಸರ ಮಾಲಿನ್ಯವಾಗುತ್ತದೆ. ವಿದ್ಯುತ್ ಚಾಲಿತ ರೈಲುಗಳಲ್ಲಿ ಈ ಸಮಸ್ಯೆ ಇಲ್ಲ. ಜತೆಗೆ ಇಂಧನವೂ ಉಳಿತಾಯವಾಗಿ ವೆಚ್ಚ ಕಡಿಮೆಯಾಗಲಿದೆ. ಕೊಂಕಣ ರೈಲ್ವೇ ಮಾರ್ಗ ಮಂಗಳೂರಿನ ತೋಕೂರಿನಿಂದ ಮುಂಬಯಿಯ ರೋಹಾ ತನಕ 741 ಕಿ.ಮೀ. ಉದ್ದವಿದೆ. ಮಂಗಳೂರಿನಿಂದ ಮುಂಬಯಿಗೆ ನೇರ ರೈಲ್ವೇ ಸಂಪರ್ಕ ಕಲ್ಪಿಸಲೆಂದು ರೈಲು ಮಾರ್ಗ ನಿರ್ಮಿ ಸಲು 1990 ಅ. 15ರಂದು ಕೊಂಕಣ ರೈಲ್ವೇ ನಿಗಮವನ್ನು ರಚಿಸಲಾಗಿತ್ತು. ಪ್ರಧಾನಿ ವಿಪಿ ಸಿಂಗ್ ಸರಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಕರಾವಳಿಯ ಜಾರ್ಜ್ ಫೆರ್ನಾಂಡಿಸ್ ಈ ಯೋಜನೆಯ ಜನಕ. ಜನತಾ ಪರಿವಾರದ ಮಧು ದಂಡವತೆ ಹಾಗೂ ರಾಮಕೃಷ್ಣ ಹೆಗಡೆ ಸಹಕರಿಸಿ ದ್ದರು. ಮಂಗಳೂರು -ಉಡುಪಿ ಮಧ್ಯೆ ಮೊದಲ ಪ್ಯಾಸೆಂಜರ್ ರೈಲು 1993ರಲ್ಲಿ ಆರಂಭ ವಾಗಿತ್ತು. ಸರಕು ತುಂಬಿದ ಟ್ರಕ್‌ಗಳ ಸಾಗಾಟ (ರೋ ರೋ) ನಿಗಮದ ಬಹು ಯಶಸ್ವಿ ಸೇವೆ.
Related Articles
950 ಕೋಟಿ ರೂ. ಅಂದಾಜು ವೆಚ್ಚ
2019 ಕಾಮಗಾರಿ ಪೂರ್ಣ ಗುರಿ
Advertisement
ದಿನೇಶ್ ಇರಾ